ಜಮ್ಮು: ಗಸ್ತು ಪಡೆ ಮೇಲೆ ಪಾಕಿಸ್ತಾನ ಸೇನೆ ದಾಳಿ, ಬಿಎಸ್ಎಫ್ ಯೋಧ ಹುತಾತ್ಮ

ಇಲ್ಲಿನ ಸಾಂಬಾ ಜಿಲ್ಲೆಯ ಅಂತಾರಾಷ್ಟ್ರೀಯ ಗಡಿಭಾಗದಲ್ಲಿ ಗಸ್ತುಪಡೆ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಜಮ್ಮು: ಇಲ್ಲಿನ ಸಾಂಬಾ ಜಿಲ್ಲೆಯ ಅಂತಾರಾಷ್ಟ್ರೀಯ ಗಡಿಭಾಗದಲ್ಲಿ ಗಸ್ತುಪಡೆ ಮೇಲೆ ಪಾಕಿಸ್ತಾನ ರೇಂಜರ್ಸ್ ದಾಳಿ ನಡೆಸಿದ್ದರಿಂದ ಗಡಿ ಭದ್ರತಾ ಪಡೆಯ(ಬಿಎಸ್ಎಫ್) ಜವಾನರೊಬ್ಬರು ಹುತಾತ್ಮರಾಗಿದ್ದಾರೆ.
ಪಾಕಿಸ್ತಾನಿ ರೇಂಜರ್ಸ್ ದಾಳಿಗೆ ಗಡಿ ಭದ್ರತಾ ಪಡೆ ತಕ್ಕ ಪ್ರತ್ಯುತ್ತರ ನೀಡಿದೆ. ಇಂದು ಬೆಳಗ್ಗೆ 9.30ರ ಸುಮಾರಿಗೆ ಸಾಂಬಾ ವಲಯದಲ್ಲಿ ಗಡಿ ಭದ್ರತಾ ಪಡೆ ಮೇಲೆ ಪಾಕಿಸ್ತಾನಿ ರೇಂಜರ್ಸ್ ಏಕಾಏಕಿ ದಾಳಿ ನಡೆಸಲು ಆರಂಭಿಸಿದರು. ದಾಳಿಯಲ್ಲಿ ಬಿಎಸ್ಎಫ್  ಕಾನ್ಸ್ಟೇಬಲ್ ತಪನ್ ಮೊಂಡಲ್ ಗಾಯಗೊಂಡಿದ್ದಾರೆ.
ಕಳೆದ ತಿಂಗಳು 31ರಂದು ಪಾಕಿಸ್ತಾನ ಪಡೆ ಕದನ ವಿರಾಮ ಉಲ್ಲಂಘಿಸಿ ಜಮ್ಮು-ಕಾಶ್ಮೀರದ ಪೂಂಚ್ ಜಿಲ್ಲೆಯ ಕರ್ಮರ ಬೆಲ್ಟ್ ನಲ್ಲಿರುವ ಗಡಿ ನಿಯಂತ್ರಣ ರೇಖೆ ಬಳಿ ಕದನ ವಿರಾಮ ಉಲ್ಲಂಘಿಸಿ ಭಾರತೀಯ ಪಡೆ ಮೇಲೆ ದಾಳಿ ನಡೆಸಿತ್ತು.
ಕಳೆದ 26ರಂದು ಪಾಕಿಸ್ತಾನ ಪಡೆ ಸಣ್ಣ ಮತ್ತು ಭಾರೀ ಶಸ್ತಾಸ್ತ್ರಗಳಿಂದ ಕೆರ್ನಿ ವಲಯದ ಶೆರ್ ಶಕ್ತಿ ಮತ್ತು ಮಂದರ್ ಪ್ರದೇಶದಲ್ಲಿ ಗಡಿ ಭದ್ರತಾ ಪಡೆ ಮೇಲೆ ದಾಳಿ ನಡೆಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com