ಕೇಂದ್ರ ಸರ್ಕಾರದ ನೋಟು ನಿಷೇಧ ಜಾರಿಗೆ ಒಂದು ವರ್ಷ ತುಂಬಿದ ಹಿನ್ನಲೆಯಲ್ಲಿ ಇಂದು ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿರುವ ರಾಹುಲ್ ಗಾಂಧಿ, ನೋಟು ನಿಷೇಧ ದೇಶ ಕಂಡ ಅತ್ಯಂತ ದೊಡ್ಡ ಆರ್ಥಿಕ ದುರಂತ ಎಂದು ಬಣ್ಣಿಸಿದ್ದಾರೆ. ಅಂತೆಯೇ ನೋಟು ನಿಷೇಧದಿಂದ ಆರ್ಥಿಕ ತೊಂದರೆಗೆ ಒಳಗಾದ ಕೋಟ್ಯಂತರ ಭಾರತೀಯರೊಂದಿಗೆ ತಾವಿದ್ದು, ಪ್ರಧಾನಿ ಮೋದಿ ಅವರ ಮೂರ್ಖ ನಿರ್ಧಾರದಿಂದ ದೇಶದ ಜನತೆ ಸಮಸ್ಯೆ ಎದುರಿಸುವಂತಾಗಿದೆ ಎಂದು ಹೇಳಿದ್ದಾರೆ.