ಸಮ-ಬೆಸ ಸಂಖ್ಯೆ ನೀತಿ ಜಾರಿ ಆದೇಶ ವಾಪಸ್ ಪಡೆದ ಆಪ್ ಸರ್ಕಾರ!

ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಅನುಮತಿ ನೀಡಿದ್ದರೂ ದೆಹಲಿ ಸರ್ಕಾರ ಸಮ-ಬೆಸ ಸಂಖ್ಯೆ ನೀತಿ ಜಾರಿಗೊಳಿಸುವ ನಿರ್ಧಾರವನ್ನು ವಾಪಸ್ ಪಡೆದಿದೆ.
ಸಮ-ಬೆಸ ಸಂಖ್ಯೆ ನೀತಿ ಜಾರಿ ಆದೇಶ ವಾಪಸ್ ಪಡೆದ ಆಪ್ ಸರ್ಕಾರ!
ಸಮ-ಬೆಸ ಸಂಖ್ಯೆ ನೀತಿ ಜಾರಿ ಆದೇಶ ವಾಪಸ್ ಪಡೆದ ಆಪ್ ಸರ್ಕಾರ!
ನವದೆಹಲಿ: ವಾಯುಮಾಲಿನ್ಯವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ದೆಹಲಿಯ ಎನ್ ಸಿಆರ್ ಪ್ರದೇಶದಲ್ಲಿ ಸಮ-ಬೆಸ ಸಂಖ್ಯೆ ವಾಹನಗಳ ಸಂಚಾರ ನೀತಿ ಜಾರಿಗೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಅನುಮತಿ ನೀಡಿದ್ದರೂ ದೆಹಲಿ ಸರ್ಕಾರ ಸಮ-ಬೆಸ ಸಂಖ್ಯೆ ನೀತಿ ಜಾರಿಗೊಳಿಸುವ ನಿರ್ಧಾರವನ್ನು ವಾಪಸ್ ಪಡೆದಿದೆ. 
ಯಾವುದೇ ವಿನಾಯಿತಿ ಇಲ್ಲದೇ ಸಮ-ಬೆಸ ಸಂಖ್ಯೆ ನಿಯಮವನ್ನು ಜಾರಿಗೊಳಿಸಬೇಕೆಂದು ಎನ್ ಜಿಟಿ ಆದೇಶ ನೀಡಿತ್ತು. ಈ ಹಿನ್ನೆಲೆಯಲ್ಲಿ ದೆಹಲಿ ಸರ್ಕಾರ ಸಮ-ಬೆಸ ಸಂಖ್ಯೆ ವಾಹನ ಸಂಚಾರ ನಿಯಮವನ್ನು ಜಾರಿಗೊಳಿಸದೇ ಇರಲು ನಿರ್ಧರಿಸಿದೆ. ಎನ್ ಜಿಟಿ ಅನುಮತಿ ನೀಡಿದ್ದ ಹಿನ್ನೆಲೆಯಲ್ಲಿ ಸಮ-ಬೆಸ ಸಂಖ್ಯೆ ವಾಹನ ಸಂಚಾರ ನಿಯಮ ಸೋಮವಾರದಿಂದ ಜಾರಿಯಾಗಬೇಕಿತ್ತು. 
ಪಿಎಂ 10 ಮಟ್ಟ 300 ಹಾಗೂ ಪಿಎಂ 2.5 ಮಟ್ಟ 500 ದಾಟುವ ಬೆನ್ನಲ್ಲೇ ಈ ನಿಯಮವನ್ನು ಕಡ್ಡಾಯವಾಗಿ ಜಾರಿಗೊಳಿಸಬೇಕು, ಸರ್ಕಾರಿ ಅಧಿಕಾರಿಗಳು, ಮಹಿಳೆಯರು ದ್ವಿಚಕ್ರ ವಾಹನಗಳಿಗೂ ಸಮ-ಬೆಸ ಸಂಖ್ಯೆ ನೀತಿ ಅನ್ವಯವಾಗಬೇಕು ಎಂದು ಸೂಚನೆ ನೀಡಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com