ಗುಜರಾತ್ ಗಡಿಯಲ್ಲಿ ನೂತನ ಅತ್ಯಾಧುನಿಕ ವಾಯುನೆಲೆ ನಿರ್ಮಾಣಕ್ಕೆ ನಿರ್ಮಲಾ ಅಸ್ತು!

ಪ್ರಧಾನಿ ನರೇಂದ್ರ ಮೋದಿ ಅವರ ತವರು ಗುಜರಾತ್ ಗೆ ಕೇಂದ್ರ ಸರ್ಕಾರ ಹೊಸದೊಂದು ಉಡುಗೊರೆ ನೀಡಿದ್ದು, ಈ ಬಾರಿ ಕೇಂದ್ರ ಸರ್ಕಾರ ನೀಡಿರುವ ಉಡುಗೊರೆ ನೆರೆಯ ಪಾಕಿಸ್ತಾನಕ್ಕೆ ನಡುಕ ಹುಟ್ಟಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ತವರು ಗುಜರಾತ್ ಗೆ ಕೇಂದ್ರ ಸರ್ಕಾರ ಹೊಸದೊಂದು ಉಡುಗೊರೆ ನೀಡಿದ್ದು, ಈ ಬಾರಿ ಕೇಂದ್ರ ಸರ್ಕಾರ ನೀಡಿರುವ ಉಡುಗೊರೆ ನೆರೆಯ ಪಾಕಿಸ್ತಾನಕ್ಕೆ ನಡುಕ ಹುಟ್ಟಿಸಿದೆ.
ಹೌದು..ಈ ಬಾರಿ ಗುಜರಾತ್ ಗೆ ಕೇಂದ್ರ ಸರ್ಕಾರ ನೀಡಿರುವ ಉಡುಗೊರೆಯೇ ಹಾಗಿದ್ದು, ಪಾಕಿಸ್ತಾನ ಸೇನೆಯ ಕಳವಳಕ್ಕೆ ಕಾರಣವಾಗಿದೆ. ಇಷ್ಟಕ್ಕೂ ಆ ಹೊಸ ಉಡುಗೊರೆ ಏನು ಎಂದರೆ ಅತ್ಯಾಧುನಿಕ ವಾಯುನೆಲೆ.. ಗುಜರಾತ್  ನ ಪಾಕಿಸ್ತಾನ ಗಡಿಗೆ ಹೊಂದಿಕೊಂಡಂತೆ ಇರುವ ಪ್ರದೇಶದಲ್ಲಿ ಕೇಂದ್ರ ಸರ್ಕಾರ ನೂತನ ವಾಯುನೆಲೆಯನ್ನು ನಿರ್ಮಾಣ ಮಾಡಲು ಮುಂದಾಗಿದ್ದು, ಈ ವಾಯುನೆಲೆ ಪಾಕಿಸ್ತಾನಕ್ಕೆ ಹೊಸ ತಲೆನೋವು ತಂದಿದೆ.
ಗುಜರಾತ್ ನಲ್ಲಿ ಈಗಾಗಲೇ ಮೂರು ವಾಯುನೆಲೆಗಳಿದ್ದು, ಸೌರಾಷ್ಟ್ರ ಪ್ರಾಂತ್ಯದ ಜಾಮ್ ನಗರ, ಬುಜ್ ಮತ್ತು ಕಚ್ ಪ್ರಾಂತ್ಯದ ನಲಿಯಾದಲ್ಲಿ ವಾಯುನೆಲೆಗಳು ಕಾರ್ಯ ನಿರ್ವಹಿಸುತ್ತಿವೆ. ಈ ಮೂರು ನೆಲೆಗಳ ಹೊರತಾಗಿಯೂ  ಬನಸ್ಕಾಂತ ಜಿಲ್ಲೆಯ ದೀಸಾದಲ್ಲಿ ಅತ್ಯಾಧುನಿಕ ವಾಯುನೆಲೆ ನಿರ್ಮಾಣಕ್ಕೆ ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಅಸ್ತು ಎಂದಿದ್ದಾರೆ. ಹೊಸ ವಾಯು ನೆಲೆಯಿಂದಾಗಿ ಭಾರತಕ್ಕೆ ಪಾಕ್‌ ವಿರುದ್ಧ ವಾಯು  ಪ್ರಾಬಲ್ಯ ದೊರಕಲಿದೆ. ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಅಧಿಕಾರ ವಹಿಸಿಕೊಂಡ ಬಳಿಕ ಭಾರತೀಯ ವಾಯು ಪಡೆಯು ಗುಜರಾತ್‌ ನಲ್ಲಿ ವಾಯು ನೆಲೆ ನಿರ್ಮಿಸಲಿದೆ ಎಂಬ ಸ್ಫೋಟಕ ವಿಷಯವನ್ನು  ಪ್ರಕಟಿಸಿದ್ದರು. 
ಬನಸ್ಕಾಂತ ಪಾಕಿಸ್ತಾನ ಗಡಿಗೆ ತೀರಾ ಸಮೀಪದಲ್ಲಿರುವ ಪ್ರದೇಶವಾಗಿದ್ದು, ಈ ಪ್ರದೇಶದಲ್ಲಿ ಭಾರತ ವಾಯುನೆಲೆ ನಿರ್ಮಾಣಕ್ಕೆ ಮುಂದಾಗಿರುವುದು ಪಾಕಿಸ್ತಾನದ ಕೆಂಗಣ್ಣಿಗೆ ಗುರಿಯಾಗಿದೆ. ಭಾರತದ ನಿರ್ಧಾರ ಮಿಲಿಟರಿ  ಪಾರಮ್ಯದಲ್ಲಿ ಶೀತಲ ಆರಂಭಕ್ಕೆ ಕಾರಣವಾಗಿದ್ದು, ಇಂತಹ ಯೋಜನೆಯನ್ನು ಭಾರತ 2001ರಲ್ಲಿ ಪಾಕ್‌ ಉಗ್ರರು ಭಾರತದ ಸಂಸತ್ತಿನ ಮೇಲೆ ದಾಳಿ ನಡೆಸಿದಾಗಲೇ ಆಲೋಚಿಸಿತ್ತು. ಅದೀಗ ಕಾರ್ಯಗತಗೊಳ್ಳುವ ಹಂತವನ್ನು  ತಲುಪಿದೆ. 
ಪಾಕಿಸ್ತಾನ ಭಾರತದ ಈ ಕ್ರಮದ ವಿರುದ್ಧ ತೀವ್ರ ಕಳವಳ ವ್ಯಕ್ತಪಡಿಸಿದೆ ಎಂದು ದ ನ್ಯೂಸ್‌ ಇಂಟರ್‌ ನ್ಯಾಷನಲ್ ವರದಿ ಮಾಡಿದ್ದು, ಪಾಕಿಸ್ತಾನದ ವಿದೇಶಾಂಗ ಸಚಿವಾಲಯದ ವಕ್ತಾರ ಮುಹಮ್ಮದ್‌ ಫೈಸಲ್‌ ಅವರ ಹೇಳಿಕೆಯನ್ನು  ಉಲ್ಲೇಖಿಸಿ ವರದಿ ಮಾಡಿದೆ. ಈ ಸಂಬಂಧ ಹೇಳಿಕೆ ಬಿಡುಗಡೆ ಮಾಡಿರುವ ಪಾಕಿಸ್ತಾನ ಸರ್ಕಾರ, "ಪಾಕ್‌ ಗಡಿ ಸಮೀಪ ಗುಜರಾತ್‌ ನಲ್ಲಿ ಭಾರತೀಯ ವಾಯು ಪಡೆ ವಾಯು ನೆಲೆಯೊಂದನ್ನು ರೂಪಿಸಲು ಮುಂದಾಗಿರುವುದು ಅದರ  ಬೇಜವಾಬ್ದಾರಿಯ ವರ್ತನೆಯಾಗಿದೆ. ಇದು ಅತ್ಯಂತ ಅಪಾಯಕಾರಿ ಕ್ರಮವಾಗಿದೆ" ಎಂದು ಪಾಕಿಸ್ತಾನ ತನ್ನ ಕಳವಳವನ್ನು ವ್ಯಕ್ತಪಡಿಸಿದೆ ಎಂದು ವರದಿಯಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com