ಭಾರತ ಜಗತ್ತಿನ ಶಕ್ತಿಶಾಲಿ ರಾಷ್ಟ್ರಗಳಲ್ಲೊಂದು ಎಂದು ಜಗತ್ತಿಗೆ ಅರ್ಥವಾಗಿದೆ: ರಾಜನಾಥ್ ಸಿಂಗ್

ಭಾರತ ದುರ್ಬಲ ದೇಶವಲ್ಲ ಜಗತ್ತಿನ ಶಕ್ತಿಶಾಲಿ ರಾಷ್ಟ್ರಗಳಲ್ಲಿ ಒಂದು ಎಂಬುದನ್ನು ಜಗತ್ತು ಅರ್ಥಮಾಡಿಕೊಳ್ಳಲಾರಂಭಿಸಿದೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್...
ರಾಜನಾಥ್ ಸಿಂಗ್
ರಾಜನಾಥ್ ಸಿಂಗ್
ಲಖನೌ: ಭಾರತ ದುರ್ಬಲ ದೇಶವಲ್ಲ ಜಗತ್ತಿನ ಶಕ್ತಿಶಾಲಿ ರಾಷ್ಟ್ರಗಳಲ್ಲಿ ಒಂದು ಎಂಬುದನ್ನು ಜಗತ್ತು ಅರ್ಥಮಾಡಿಕೊಳ್ಳಲಾರಂಭಿಸಿದೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. 
ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಮಹತ್ವ ಹೆಚ್ಚಿದೆ. ಭಾರತ ಜಗತ್ತಿನ ಅತಿದೊಡ್ಡ ಅರ್ಥ ವ್ಯವಸ್ಥೆ ಎಂಬುದನ್ನು ಈ ಕಾಲಘಟ್ಟದಲ್ಲಿ ಜಗತ್ತು ಮನವರಿಕೆ ಮಾಡಿಕೊಂಡಿದೆ ಎಂದು ಪತ್ರಿಕೆಯೊಂದು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹೇಳಿದ್ದಾರೆ. 
ಭಾರತದ ಕುರಿತು ಎಲ್ಲೆಡೆ ಶ್ಲಾಘನೆ ಮಾತುಗಳು ಕೇಳಿಬರುತ್ತಿದ್ದು ಟೀಕೆಗಳು ಕಡಿಮೆಯಾಗಿವೆ. ನಾನು ಅಂದುಕೊಂಡಿದ್ದನ್ನು ಸಾಧಿಸಿದ್ದೇವೆ ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ. 
ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಮೂರು ವರ್ಷಗಳ ಸಾಧನೆ ಕುರಿತಂತ ಪ್ರಶ್ನೆಗೆ ಉತ್ತರಿಸಿದ ಅವರು ತಮ್ಮ ಸ್ವಂತ ನಿರ್ವಹಣೆ ಬಗ್ಗೆ ತಾವೇ ಮೌಲ್ಯಮಾಪನ ಮಾಡಲು ಬಯಸುವುದಿಲ್ಲ, ಆದರೆ ಒಟ್ಟಾರೆಯಾಗಿ ದೇಶದ ವಿಶ್ವಾಸಾರ್ಹತೆ ಹೆಚ್ಚಿದೆ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com