ಇತ್ತೀಚಿನ ಪಿಎಸ್ಎಲ್ ವಿ ರಾಕೆಟ್ ವೈಫಲ್ಯದ ಹಿನ್ನೆಲೆ ಇಸ್ರೋ ಮುಂದಿನ ರಾಕೆಟ್ ಮತ್ತಷ್ಟು ಸದೃಢ!

ಕಳೆದ ಬಾರಿ ಪಿಎಸ್ ಎಲ್ ವಿ ರಾಕೆಟ್ ನ ವೈಫಲ್ಯದಿಂದ ಎಚ್ಚೆತ್ತಿರುವ ಇಸ್ರೋ, ಮುಂದಿನ ರಾಕೆಟ್ ನ ಗುಣಮಟ್ಟವನ್ನು ಹೆಚ್ಚಿಸಿದೆ ಎಂದು ಸಂಸ್ಥೆಯ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಪಿಎಸ್ಎಲ್ ವಿ
ಪಿಎಸ್ಎಲ್ ವಿ
ಚೆನ್ನೈ: ಕಳೆದ ಬಾರಿ ಪಿಎಸ್ ಎಲ್ ವಿ ರಾಕೆಟ್ ನ ವೈಫಲ್ಯದಿಂದ ಎಚ್ಚೆತ್ತಿರುವ ಇಸ್ರೋ, ಮುಂದಿನ ರಾಕೆಟ್ ನ ಗುಣಮಟ್ಟವನ್ನು ಹೆಚ್ಚಿಸಿದೆ ಎಂದು ಸಂಸ್ಥೆಯ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. 
ಆಗಸ್ಟ್ 31 ರಂದು ಉಡಾವಣೆಯಾಗಿದ್ದ ಪಿಎಸ್ಎಲ್ ವಿ-XL ರಾಕೆಟ್ ನ ಉಡಾವಣೆ ನಂತರ ಹೀಟ್ ಶೀಲ್ಡ್ (ಉಷ್ಣ ಕವಚ) ಪ್ರತ್ಯೇಕಗೊಳ್ಳದ ಹಿನ್ನೆಲೆಯಲ್ಲಿ ಉಡಾವಣೆಯ ಉದ್ದೇಶ ವಿಫಲಗೊಂಡಿತ್ತು. ಇದಾದ ಬಳಿಕ ಡಿಸೆಂಬರ್ ನಲ್ಲಿ ಮತ್ತೊಂದು ರಾಕೆಟ್ ಉಡಾವಣೆಯಾಗಲಿದೆ. ಈ ಹಿಂದೆ ಉಡಾವಣೆಯಾಗಿದ್ದ ರಾಕೆಟ್ ನ ವೈಫಲ್ಯಕ್ಕೆ ಕಾರಣವಾದ ಅಂಶಗಳ ಬಗ್ಗೆ ಅಧ್ಯಯನ ನಡೆಸಲಾಗುತ್ತಿದೆ, ಮುಂದಿನ ರಾಕೆಟ್ ನ ಗುಣಮಟ್ಟ, ದೃಢತೆಯನ್ನು ಮತ್ತಷ್ಟು ಹೆಚ್ಚಿಸಲಾಗಿದೆ ಎಂದು ವಿಕ್ರಮ್ ಸಾರಾಭಾಯ್ ಕೇಂದ್ರದ ನಿರ್ದೇಶಕ ಕೆ. ಶಿವನ್ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com