ಅಪಘಾತವೇನು ಆಗಿಲ್ಲ...ನಾನು ಚೆನ್ನಾಗಿದ್ದೇನೆ: ಕೋಲ್ಕತ್ತಾದಲ್ಲಿ ಆಕ್ಸಿಡೆಂಟ್ ವರದಿ ಬಗ್ಗೆ ಸ್ಪಷ್ಟನೆ ನೀಡಿದ ಬಚ್ಚನ್

ಕೋಲ್ಕತ್ತಾದಲ್ಲಿ ಚಲನಚಿತ್ರೋತ್ಸವ ಮುಗಿಸಿಕೊಂಡು ಹೋಗುತ್ತಿದ್ದಾಗ ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಅವರಿಗೆ ಅಪಘಾತವಾಗಿತ್ತು ....
ಅಮಿತಾಬ್ ಬಚ್ಚನ್
ಅಮಿತಾಬ್ ಬಚ್ಚನ್
Updated on: 
ನವದೆಹಲಿ: ಕೋಲ್ಕತ್ತಾದಲ್ಲಿ ಚಲನಚಿತ್ರೋತ್ಸವ ಮುಗಿಸಿಕೊಂಡು ಹೋಗುತ್ತಿದ್ದಾಗ ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಅವರಿಗೆ ಅಪಘಾತವಾಗಿತ್ತು ಎಂಬ ಸುದ್ದಿಗಳು ಬಂದಿದ್ದವು. ಬಚ್ಚನ್ ಚಲಿಸುತ್ತಿದ್ದ ಮರ್ಸಿಡಿಸ್ ಕಾರಿನ ಚಕ್ರ ಕಳಚಿಹೋಗಿತ್ತು, ಆದರೆ ಅವರಿಗೇನು ತೊಂದರೆಯಾಗಿಲ್ಲ ಎಂದು ಕೂಡ ಸುದ್ದಿ ಬಂದಿತ್ತು.
ಇದೀಗ ಈ ಬಗ್ಗೆ ಸ್ವತಃ ಅಮಿತಾಬ್ ಬಚ್ಚನ್ ಅವರೇ ಟ್ವೀಟ್ ಮಾಡಿದ್ದಾರೆ. ಅಪಘಾತದ ಬಗ್ಗೆ ಬರುವ ವರದಿಗಳು ಸುಳ್ಳು ಎಂದು ಹೇಳಿದ್ದಾರೆ. ಅಪಘಾತ ನಡೆದೇ ಇಲ್ಲ ಎಂದು ಹೇಳುವ ಮೂಲಕ ಅಭಿಮಾನಿಗಳಿಗೆ ಖುಷಿಯ ಸುದ್ದಿಯನ್ನು ನೀಡಿದ್ದಾರೆ.
ವೃತ್ತಿಜೀವನದಲ್ಲಿ ಬಚ್ಚನ್ ಅವರು ಥಗ್ಸ್ ಆಫ್ ಹಿಂದೂಸ್ತಾನ್ ಮತ್ತು 102 ನಾಟ್ ಔಟ್ ಚಿತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನಿನ್ನೆ ತಮ್ಮ ಮೊಮ್ಮಗಳು ಆರಾಧ್ಯ ಬಚ್ಚನ್ ಳ 6ನೇ ವರ್ಷದ ಹುಟ್ಟುಹಬ್ಬ ಪಾರ್ಟಿಯಲ್ಲಿ ಕೂಡ ಅಮಿತಾಬ್ ಬಚ್ಚನ್ ಕಾಣಿಸಿಕೊಂಡಿದ್ದರು. 
ಮೊಮ್ಮಗಳ ಹುಟ್ಟುಹಬ್ಬದ ಸಂತೋಷವನ್ನು ಕೂಡ ಬಿಗ್ ಬಿ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com