ನೋಟು ನಿಷೇಧ, ಜಿಎಸ್‌ಟಿ ಮತ್ತು ಆಧಾರ್ ಜೋಡಣೆಯಂತಹ ಸುಧಾರಣಾ ಕ್ರಮಗಳನ್ನು ಕೈಗೊಂಡಿರುವ ಕೇಂದ್ರ ಸರ್ಕಾರ ಈಗ 1+1+1 ಬಿಲಿಯನ್ ಗುರಿಯನ್ನು ಹೊಂದಿದೆ ಎಂದು ಹೇಳಲಾಗಿದೆ. ಆಂಗ್ಲ ದೈನಿಕವೊಂದರ ವರದಿಯಲ್ಲಿರುವಂತೆ 1+1+1 ಬಿಲಿಯನ್ ಎಂದರೆ 100 ಕೋಟಿ ಆಧಾರ್ ಕಾರ್ಡ್, 100 ಕೋಟಿ ಬ್ಯಾಂಕ್ ಖಾತೆ, 100 ಕೋಟಿ ಮೊಬೈಲ್ ಸಿಮ್ ಜತೆ ಜೋಡಣೆ ಮಾಡುವ ಗುರಿಯನ್ನು ಹೊಂದಲಾಗಿದೆ. ಆದರೆ ಈ ಗುರಿ ಸಾಧನೆಗೆ ಕೇಂದ್ರ ಸರ್ಕಾರ ಅಧಿಕಾರಿಗಳಿಗೆ ಯಾವುದೇ ರೀತಿಯ ಗಡವು ಅಥವಾ ಸಮಯಾವಧಿ ನೀಡಿಲ್ಲ ಎಂದು ಹೇಳಲಾಗಿದೆ.