ಹೈದರಾಬಾದ್: ವಾಯುಪಡೆಯ ಕಿರಣ್ ತರಬೇತಿ ವಿಮಾನ ತೆಲಂಗಾಣದಲ್ಲಿ ಪತನಗೊಂಡಿದ್ದು, ಪೈಲಟ್ ಅಪಾಯದಿಂದ ಪಾರಾಗಿದ್ದಾರೆ.
ಹಕೀಮ್‌ಪೆಟ್ ವಾಯುಪಡೆ ಕೇಂದ್ರದಿಂದ ಟೇಕಾಫ್ ಆಗಿದ್ದ ಈ ತರಬೇತಿ ವಿಮಾನ, ಟೇಕ್ ಆಫ್ ಆದ ಪ್ರದೇಶದಿಂದ 50 ಕಿ.ಮೀ ದೂರದಲ್ಲಿ ಪತನಗೊಂಡಿದ್ದು, ತರಬೇತಿ ಪಡೆಯುತ್ತಿದ್ದ ಪೈಲಟ್ ಅಪಾಯದಿಂದ ಪಾರಾಗಿದ್ದಾರೆ ಎಂದು ಐಎಎಫ್ ಮಾಹಿತಿ ನೀಡಿದೆ.
ಕಿರಣ್ ತರಬೇತಿ ವಿಮಾನಗಳ ಪತನಕ್ಕೆ ಕಾರಣವೇನೆಂಬುದನ್ನು ವಾಯು ಪಡೆ ಇನ್ನಷ್ಟೇ ಪತ್ತೆ ಮಾಡಬೇಕಿದ್ದು, ಘಟನೆ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ.