ಕಾಶ್ಮೀರದ ವಿವಾದ: ಸಿಎಂ ಮುಫ್ತಿ, ರಾಜ್ಯಪಾಲರನ್ನು ಭೇಟಿಯಾದ ಸಂಧಾನಕಾರ ದಿನೇಶ್ವರ್ ಶರ್ಮಾ
ಕಾಶ್ಮೀರ ಸಮಸ್ಯೆ ಬಗೆಹರಿಸುವ ಸಲುವಾದಿ ಕೇಂದ್ರ ಸರ್ಕಾರ ನೇಮಿಸಿರುವ ಸಂಧಾರನಕಾರ ದಿನೇಶ್ವರ್ ಶರ್ಮಾ ಅವರು ಜಮ್ಮು ಮತ್ತು ಕಾಶ್ಮೀರ ಮುಖ್ಯ ಮೆಹಬೂಬಾ ಮುಪ್ತಿ ಹಾಗೂ ರಾಜ್ಯಪಾಲ ಎನ್.ಎನ್. ವೊಹ್ರಾ ಅವರನ್ನು ಶುಕ್ರವಾರ ಭೇಟಿಯಾಗಿದ್ದು...
ಜಮ್ಮು: ಕಾಶ್ಮೀರ ಸಮಸ್ಯೆ ಬಗೆಹರಿಸುವ ಸಲುವಾದಿ ಕೇಂದ್ರ ಸರ್ಕಾರ ನೇಮಿಸಿರುವ ಸಂಧಾರನಕಾರ ದಿನೇಶ್ವರ್ ಶರ್ಮಾ ಅವರು ಜಮ್ಮು ಮತ್ತು ಕಾಶ್ಮೀರ ಮುಖ್ಯ ಮೆಹಬೂಬಾ ಮುಪ್ತಿ ಹಾಗೂ ರಾಜ್ಯಪಾಲ ಎನ್.ಎನ್. ವೊಹ್ರಾ ಅವರನ್ನು ಶುಕ್ರವಾರ ಭೇಟಿಯಾಗಿದ್ದು, ಮಹತ್ವದ ವಿಚಾರಗಳ ಕುರಿತಂತೆ ಮಾತುಕತೆ ನಡೆಸಿದ್ದಾರೆಂದು ತಿಳಿದುಬಂದಿದೆ.
ಸಿಎಂ ಮೆಹಬೂಬಾ ಮುಫ್ತಿ ಹಾಗೂ ರಾಜ್ಯಪಾಲರನ್ನು ಭೇಟಿಯಾಗಿರುವ ದಿನೇಶ್ವರ್ ಶರ್ಮಾ ಅವರು, ಹಲವು ಮಹತ್ವದ ವಿಚಾರಗಳ ಕುರಿತಂತೆ ಮಾತುಕತೆ ನಡೆಸಿದ್ದು, ಇದೇ ಸಂದರ್ಭದಲ್ಲಿ ರಾಜ್ಯದಲ್ಲಿ ನಡೆಸಲು ನಿರ್ಧರಿಸಲಾಗಿರುವ ಚರ್ಚೆಗಳ ವೇಳಾಪಟ್ಟಿಯನ್ನು ತಿಳಿಸಿದ್ದಾರೆಂದು ಅಧಿಕಾರಿಗಳು ಹೇಳಿದ್ದಾರೆ.
ರಾಜ್ಯಪಾಲ ವೊಹ್ರಾ ಅವರನ್ನು ರಾಜಭವನದಲ್ಲಿ ಭೇಟಿಯಾದ ಶರ್ಮಾ ಅವರು ಸ್ಥಳದಲ್ಲಿ ನಡೆಯುತ್ತಿರುವ ರಾಜಕೀ ಅಭಿವೃದ್ಧಿಗಳ ಕುರಿತಂತೆ ಮಾತುಕತೆ ನಡೆಸಿದ್ದಾರೆಂದು ವಕ್ತಾರರು ತಿಳಿಸಿದ್ದಾರೆ.
ಅಕ್ಟೋಬರ್ 23 ರಂದು ಕೇಂದ್ರ ಸರ್ಕಾರ ಕಾಶ್ಮೀರ ಸಮಸ್ಯೆಯನ್ನು ಬಗೆಹರಿಸುವ ಸಲುವಾಗಿ ದಿನೇಶ್ವರ್ ಶರ್ಮಾ ಅವರನ್ನೇ ನೇಮಕ ಮಾಡಿತ್ತು. ಸಂಧಾನಕಾರರಾಗಿ ನೇಮಕಗೊಂಡ ಬಳಿಕ ಶರ್ಮಾ ಅವರು ಇದೀಗ ಎರಡನೇ ಬಾರಿ ಕಾಶ್ಮೀರಕ್ಕೆ ಭೇಟಿ ನೀಡಿದ್ದಾರೆ.