ಕಾಶ್ಮೀರ ಪಾಕಿಸ್ತಾನದ್ದು ಎಂದು ಎಲ್ಲಿ ಬರೆದಿದೆ?: ಪಾಕ್ ಆಕ್ರಮಿತ ಕಾಶ್ಮೀರದ ನಾಯಕ

ಕಾಶ್ಮೀರ ಪಾಕಿಸ್ತಾನದ್ದು ಎಂದು ಎಲ್ಲಿ ಬರೆದಿದೆ ಎಂದು ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ನಾಯಕ ತೌಕೀರ್ ಗಿಲಾನಿ ಪ್ರಶ್ನಿಸಿದ್ದಾರೆ.
ಪಾಕ್ ಆಕ್ರಮಿತ ಕಾಶ್ಮೀರದ ನಾಯಕ
ಪಾಕ್ ಆಕ್ರಮಿತ ಕಾಶ್ಮೀರದ ನಾಯಕ
ಮುಜಾಫರಾಬಾದ್: ಕಾಶ್ಮೀರ ಪಾಕಿಸ್ತಾನದ್ದು ಎಂದು ಎಲ್ಲಿ ಬರೆದಿದೆ ಎಂದು ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ನಾಯಕ ತೌಕೀರ್ ಗಿಲಾನಿ ಪ್ರಶ್ನಿಸಿದ್ದಾರೆ. 
ಪಾಕ್ ಆಕ್ರಮಿತ ಕಾಶ್ಮೀರ ಪಾಕಿಸ್ತಾನದ್ದೆಂದು ಯಾವುದೇ ಒಪ್ಪಂದದಲ್ಲಿ ಹೇಳಲಾಗಿಲ್ಲ, ಹಾಗೆಂದು ಎಲ್ಲಿ ಬರೆದಿದೆ? ಕಾಶ್ಮೀರವನ್ನು ಪಾಕ್ ಆಕ್ರಮಿತ ಎನ್ನುವುದು ತಪ್ಪು, ಕಾಶ್ಮೀರವನ್ನು ಪಾಕಿಸ್ತಾನದ್ದು ಎಂದು ಮುಸ್ಲಿಂ ಕಾನ್ಫರೆನ್ಸ್ ಹಾಗೂ ಅವರ ಹಣ ಪಡೆಯುತ್ತಿರುವವರು ಹೇಳುತ್ತಾರೆ. ಅಂಥವರೇ ನಮ್ಮ ಬಾತ್ ರೂಂ ಬಾಗಿಲ ಮೇಲೂ ಕಾಶ್ಮೀರ ಪಾಕಿಸ್ತಾನದ್ದಾಗುತ್ತದೆಂದು ಬರೆದಿದ್ದಾರೆ ಎಂದು ಗಿಲಾನಿ ಹೇಳಿದ್ದಾರೆ. 
ಅವಿವೇಕತನಕ್ಕೂ ಒಂದು ಮಿತಿ ಇದೆ ಪಾಕಿಸ್ತಾನದ ಮಾಧ್ಯಮಗಳಲ್ಲಿ ಅಲ್ಲಿನವರು ನಮ್ಮನ್ನು ವಿಶ್ವಾಸಘಾತುಕರು ಎನ್ನುತ್ತಾರೆ. ಆದರೆ ಯಾರೂ ಖರೀದಿ ಮಾಡದ ಪಾಕಿಸ್ತಾನದ ಉಪ್ಪನ್ನು ನಾವು 20 ರೂ ಕೊಟ್ಟು ಖರೀದಿಸುತ್ತೇವೆ, ಆದರೆ ಪಾಕಿಸ್ತಾನದವರು ಕುಡಿಯುವುದು ನಮ್ಮ ನೀರನ್ನೇ ಎಂದು ಗಿಲಾನಿ ಹೇಳಿದ್ದಾರೆ. 
ಮಾಜಿ ಪ್ರತ್ಯೇಕತಾವಾದಿ ಸಜ್ಜದ್ ಲೋನ್ ಅವರ ತಂದೆ ಮಿರ್ವಾಜ ಉಮರ್ ಫಾರೂಕ್ ಅವರನ್ನು ಹತ್ಯೆ ಮಾಡಿದ್ದರ ಹಿಂದೆ ಪಾಕಿಸ್ತಾನದ ಕೈವಾಡ ಇದೆ ಎಂದು ಗಿಲಾನಿ ಆರೋಪಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com