ಈ ಕುರಿತಂತೆ ಮಾತನಾಡಿರುವ ಕಾಂಗ್ರೆಸ್ ನಾಯಕ ಸಂದೀಪ್ ದೀಕ್ಷಿತ್ ಅವರು, ರಾಹುಲ್ ಯಾವಾಗ ಅಧಿಕಾರ ಸ್ವೀಕರಿಸುತ್ತಾರೆಂಬುದರ ಬಗ್ಗೆ ದಿನಾಂಕ ನಿಗದಿಯಾಗಿಲ್ಲ. ಆದರೆ, ರಾಹುಲ್ ಅವರೇ ಪಕ್ಷದ ಅಧ್ಯಕ್ಷರಾಗುವುದು ಖಚಿತ. ಪಕ್ಷದ ಚುನಾವಣೆ ನಡೆಸಲು ವ್ಯವಸ್ಥೆ ಹಾಗೂ ನಿಯಮಗಳಿವೆ. ವ್ಯವಸ್ಥೆಗಳು ಪೂರ್ಣಗೊಂಡ ಬಳಿಕ ಪಕ್ಷದ ನೂತನ ಅಧ್ಯಕ್ಷರನ್ನು ಆಯ್ಕೆ ಮಾಡಲಾಗುತ್ತದೆ. ರಾಹುಲ್ ಗಾಂಧಿಯವರ ನಮ್ಮ ಅಧ್ಯಕ್ಷರಾಬೇಕೆಂದು ಕಾಂಗ್ರೆಸ್ ನಲ್ಲಿರುವ ಪ್ರತೀಯೊಬ್ಬರು ಬಯಸಿದ್ದಾರೆ ಎಂದು ಹೇಳಿದ್ದಾರೆ.