ರಾಷ್ಟ್ರಧ್ವಜಕ್ಕೆ ಅವಮಾನ: ಹಾರ್ದಿಕ್ ಪಟೇಲ್ ವಿರುದ್ದದ ಪ್ರಕರಣ ಕೈಬಿಟ್ಟ ಗುಜರಾತ್ ಸರ್ಕಾರ

ಪಟೇಲ್ ಸಮುದಾಯದ ಮೀಸಲಾತಿ ಹೋರಾಟಗಾರ ಹಾರ್ದಿಕ್ ಪಟೇಲ್ ವಿರುದ್ದ ದಾಖಲಾಗಿದ್ದ ರಾಷ್ಟ್ರಧ್ವಜ ಅವಮಾನ ಪ್ರಕರಣವನ್ನು ಗುಜರಾತ್ ರಾಜ್ಯ. ಸರ್ಕಾರ ಗುರುವಾರ ಕೈಬಿಟ್ಟಿದೆ...
ಹಾರ್ದಿಕ್ ಪಟೇಲ್
ಹಾರ್ದಿಕ್ ಪಟೇಲ್
Updated on: 
ರಾಜ್'ಕೋಟ್: ಪಟೇಲ್ ಸಮುದಾಯದ ಮೀಸಲಾತಿ ಹೋರಾಟಗಾರ ಹಾರ್ದಿಕ್ ಪಟೇಲ್ ವಿರುದ್ದ ದಾಖಲಾಗಿದ್ದ ರಾಷ್ಟ್ರಧ್ವಜ ಅವಮಾನ ಪ್ರಕರಣವನ್ನು ಗುಜರಾತ್ ರಾಜ್ಯ. ಸರ್ಕಾರ ಗುರುವಾರ ಕೈಬಿಟ್ಟಿದೆ. 
ರಾಜ್ಯ ಗೃಹ ಇಲಾಖೆಯ ಆದೇಶದಂತೆ ಹಾರ್ದಿಕ್ ಪಟೇಲ್ ಸೇರಿದಂದೆ ಹಲವರ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ಕೈಬಿಡಲಾಗಿದೆ ಎಂದು ರಾಜ್'ಕೋಟ್ ಜಿಲ್ಲಾಧಿಕಾರಿ ವಿಕ್ರಾಂತ್ ಪಾಂಡೆ ತಿಳಿಸಿದ್ದಾರೆ. 
ಹಾರ್ದಿಕ್ ಪಟೇಲ್ ವಿರುದ್ದ ಕೇವಲ ಎಫ್ಐಆರ್ ಅಷ್ಟೇ ದಾಖಲಾಗಿತ್ತು. ಮುಂದಿನ ಎಲ್ಲಾ ಪ್ರಕ್ರಿಯೆಗಳನ್ನು ನ್ಯಾಯಾಲಯದಲ್ಲಿಯೇ ಪೂರ್ಣಗೊಳಿಸಲಾಗುತ್ತಿದೆ. ಪ್ರಕಱಣ ಸಂಬಂಧ ಇನ್ನುಳಿದ ಐವರ ವಿರುದ್ಧ ದಾಖಲಾಗಿದ್ದ ಪ್ರಕಱಣವನ್ನೂ ಕೈಬಿಡಲಾಗಿದೆ ಎಂದಿದ್ದಾರೆ. 
2015ರ ಅ.19 ರಂದು ರಾಜ್'ಕೋಟ್ ಕ್ರಿಕೆಟ್ ಸ್ಟೇಡಿಯಂ ನಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾದ ಪಂದ್ಯ ನಿಗದಿಯಾಗಿತ್ತು. ಇದೇ ದಿನ ಹಾರ್ದಿಕ್ ಪಟೇಲ್ ಅವರು ತಮ್ಮ ಕಾರಿನಲ್ಲಿ ಸ್ಟೇಡಿಯಂನತ್ತ ತೆರಳುತ್ತಿದ್ದ ವೇಳೆ ಪೊಲೀಸರು ಅವರನ್ನು ತಡೆದಿದ್ದರು. 
ಈ ವೇಳೆ ಹಾರ್ದಿಕ್ ಪಟೇಲ್ ಮಾಧ್ಯಮಗಳೊಂದಿಗೆ ಮಾತನಾಡಲು ಮುಂದಾಗಿ ರಾಷ್ಟ್ರಧ್ವಜದ ಮೇಲೆ ಕಾಲಿಟ್ಟಿದ್ದರು ಎಂದು ಹೇಳಲಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ಹಾರ್ದಿಕ್ ಮತ್ತು ಪತಿದಾರ್ ಅನಾಮತ್ ಆಂದೋಲನ್ ಸಮಿತಿ (ಪಿಎಎಎಸ್)ಯ ಕೆಲ ಹೋರಾಟಗಾರರ ವಿರುದ್ದ ಪ್ರಕರಣ ದಾಖಲಾಗಿತ್ತು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com