ಕೋಲ್ಕತಾ: ಮಹಿಳೆ ನಿಗೂಢ ಸಾವು- ಬಾಯ್'ಫ್ರೆಂಡ್ ಬಂಧನ

ದಕ್ಷಿಣ ಕೋಲ್ಕತಾದ ಚೆಟ್ಲಾ ಪ್ರದೇಶದಲ್ಲಿರುವ ಹೋಟೆಲ್ ನಲ್ಲಿದ್ದ ಮಹಿಳೆಯೊಬ್ಬರು ಅತೀವ ರಕ್ತಸ್ರಾವದಿಂದಾಗಿ ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ಭಾನುವಾರ ನಡೆದಿದೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಕೋಲ್ಕತಾ: ದಕ್ಷಿಣ ಕೋಲ್ಕತಾದ ಚೆಟ್ಲಾ ಪ್ರದೇಶದಲ್ಲಿರುವ ಹೋಟೆಲ್ ನಲ್ಲಿದ್ದ ಮಹಿಳೆಯೊಬ್ಬರು ಅತೀವ ರಕ್ತಸ್ರಾವದಿಂದಾಗಿ ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ಭಾನುವಾರ ನಡೆದಿದೆ. 
ಚೆಟ್ಲಾ ಪ್ರದೇಶದಲ್ಲಿರುವ ಹೋಟೆಲ್ ರೂಮ್'ನ್ನು ಆನ್ ಲೈನ್ ಮೂಲಕ ಬುಕ್ ಮಾಡಿದ್ದ ಮಹಿಳೆ ಹಾಗೂ ಯುವಕ ಶನಿವಾರ ರೂಮಿಗೆ ಬಂದಿದ್ದಾರೆ. ನಿನ್ನೆ ಮಧ್ಯಾಹ್ನ ಅತೀವ ರಕ್ತಸ್ರಾವದಿಂದಾಗಿ ಮಹಿಳೆಯ ಸ್ಥಿತಿ ಚಿಂತಾಜನಕವಾಗಿದೆ. 
ಬಳಿಕ ಯುವಕ ಮಹಿಳೆಯನ್ನು ಸ್ಥಳೀಯ ಆಸ್ಪತ್ರೆಯೊಂದಕ್ಕೆ ಕರೆದುಕೊಂಡು ಹೋಗಿದ್ದಾನೆ. ಈ ವೇಳೆ ಆಸ್ಪತ್ರೆ ಸಿಬ್ಬಂದಿಗಳು ಮಹಿಳೆಯನ್ನು ದಾಖಲು ಮಾಡಿಕೊಳ್ಳಲು ನಿರಾಕರಿಸಿದ್ದಾರೆ. ಬಳಿಕ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ವೇಳೆ ವೈದ್ಯರು ಮಹಿಳೆ ಸಾವನ್ನಪ್ಪಿರುವುದಾಗಿ ತಿಳಿಸಿದ್ದಾರೆ. 
ಪ್ರಕರಣ ಸಂಬಂಧ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿರುವ ಪೊಲೀಸರು, ಮಹಿಳೆಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿ ಯುವಕರನನ್ನು ಬಂಧನಕ್ಕೊಳಪಡಿಸಿ ವಿಚಾರಣೆ ನಡೆಸುತ್ತಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com