ಶಾಲೆಯೊಂದರ ಕಾರ್ಯಕ್ರಮದಲ್ ಪಾಲ್ಗೊಂಡು ಮಾತನಾಡಿದ ಮೋಹನ್ ಭಾಗ್ವತ್ ಅವರು, ಜರ್ಮನ್ನರ ನಾಡು, ಜರ್ಮನಿ, ಬ್ರಿಟೀಷರನಾಡು ಬ್ರಿಟನ್, ಫ್ರೆಂಚರ ನಾಡು ಫ್ರಾನ್ಸ್ ಅಂತೆಯೇ ಹಿಂದೂಗಳ ನಾಡು ಹಿಂದೂಸ್ತಾನವಾಗಿದೆ. ಭಾರತದ ಹಿಂದೂರಾಷ್ಟ್ರವಾದ ಮಾತ್ರಕ್ಕೆ ಅನ್ಯರು ಇಲ್ಲಿ ಇರಬಾರದು ಎಂದೇನೂ ಇಲ್ಲ. ಹಿಂದೂ ಎಂಬ ಪದವು ಭಾರತಮಾತೆಯ ಎಲ್ಲ ಮಕ್ಕಳನ್ನೂ ಒಳಗೊಂಡಿರುತ್ತದೆ. ಅಂತೆಯೇ ಭಾರತೀಯ ಸಂಸ್ಕೃತಿಗೆ ಅನುಸಾರವಾಗಿ ನಡೆಯುವವರೂ ಕೂಡ ಭಾರತೀಯರೇ ಎಂದು ಅವರು ಹೇಳಿದ್ದಾರೆ.