3 ದಿನಗಳಲ್ಲಿ 20 ನವಜಾತ ಶಿಶುಗಳ ಸಾವು: ತನಿಖೆಗೆ ಆದೇಶಿಸಿದ ಗುಜರಾತ್ ಸರ್ಕಾರ

ಕಳೆದ ಮೂರು ದಿನಗಳಲ್ಲಿ 20 ನವಜಾತ ಶಿಶುಗಳು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ಗುಜರಾತ್ ಸರ್ಕಾರ ..
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on
ಅಹಮದಾಬಾದ್: ಕಳೆದ ಮೂರು ದಿನಗಳಲ್ಲಿ 20 ನವಜಾತ ಶಿಶುಗಳು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ಗುಜರಾತ್ ಸರ್ಕಾರ ಆದೇಶಿಸಿದೆ.
ಆಹಮದಾಬಾದ್ ನ ಸಿವಿಲ್ ಆಸ್ಪತ್ರೆಯಲ್ಲಿದ್ದ ಐಸಿಯುನಲ್ಲಿ  ಒಟ್ಟು 20 ಶಿಶುಗಳು ಹಾಗೆಯೇ 24 ಗಂಟೆಗಳಲ್ಲಿ 9 ಮಕ್ಕಳು ಮೃತಪಟ್ಟಿವೆ.24 ಗಂಟೆಗಳಲ್ಲಿ ಸಾವನ್ನಪ್ಪಿದ 9 ಮಕ್ಕಳ ಪೈಕಿ ಐದು ನವಜಾತ ಶಿಶುಗಳು, ಮಾರಾಣಾಂತಿಕ ಸ್ಥಿತಿ ತಲುಪಿದ್ದವು, ಎಂದು ಸರ್ಕಾರದ ಹೇಳಿಕೆ ತಿಳಿಸಿದೆ.
ಈ ನವಜಾತ ಶಿಶುಗಳು ಕಡಿಮೆ ತೂಕ, ಸೇರಿದಂತೆ ಹಲವು ರೋಗಗಳಿಂದ ನರಳುತ್ತಿದ್ದವು, ಕಳೆದ ರಾತ್ರಿ ಮತ್ತೆ ಎರಡು ಶಿಶುಗಳು ಮರಣ ಹೊಂದಿವೆ ಎಂದು ವೈದ್ಯರು ತಿಳಿಸಿದ್ದು, ಒಟ್ಟಿನಲ್ಲಿ  ಕಳೆದ ಮೂರು ದಿನಗಳಿಂದ 20 ಮಕ್ಕಳು ಸಾವನ್ನಪ್ಪಿವೆ.
ಇನ್ನೂ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಸಚಿವ ವಿಜಯ್ ರುಪಾನಿ ಯಾರು ಹೊಣೆಗಾರರೋ ಅವರ ವಿರುದ್ದ ತನಿಖೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ. ಮೂರು ಮಂದಿ ತಜ್ಞರ ಸಮಿತಿ ರಚಿಸಲಾಗಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com