ಅದನ್ನು ಮತ್ತಷ್ಟು ಗಟ್ಟಿಗೊಳಿಸಲು ಇದೊಂದು ವೇದಿಕೆಯಾಗಿದೆ. ಜಾಗತಿಕ ಮಟ್ಟದಲ್ಲಿ ನಾವು ಸಮಾನ ಆಸಕ್ತಿಯನ್ನು ಹೊಂದಿದ್ದೇವೆ. ಭಾರತದಲ್ಲಿ ಸುಧಾರಣೆ ಕಾರ್ಯಗಳು ನಡೆಯುತ್ತಿವೆ. ಇದು ಇಟೆಲಿಯ ಉದ್ಯಮ ಸಮುದಾಯಕ್ಕೆ ಬಂಡವಾಳ ಹೂಡಿಕೆಗೆ ಒಳ್ಳೆಯ ಅವಕಾಶವಾಗಿದೆ. ಇಟೆಲಿಯಲ್ಲಿ ಕೂಡ ಭಾರತದ ಉತ್ತಮ ಕಂಪೆನಿಗಳು ಹೂಡಿಕೆ ಮಾಡಿವೆ ಎಂದು ಮಾಧ್ಯಮಗಳೊಂದಿಗೆ ಮಾತನಾಡುತ್ತಾ ಹೇಳಿದರು.