ಕಳ್ಳತನ ಹಾಗೂ ದರೋಡೆ ಪ್ರಕರಣಗಳ ತನಿಖೆಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳು ಪ್ರಮುಖ ಪಾತ್ರವನ್ನು ನಿಭಾಯಿಸುತ್ತವೆ. ರಜೆ ನಿಮಿತ್ತ ಜನರು ಮನೆಯಿಂದ ಹೊರಹೋದಂತಹ ಸಂದರ್ಭಗಳಲ್ಲಿ ಕಳ್ಳತನವಾಗುವ ಸಂದರ್ಭಗಳು ಹೆಚ್ಚು. ಜನರು ಮನೆಗಳಲ್ಲಿ ದುಡ್ಡು ಹಾಗೂ ಆಭರಣಗಳನ್ನು ಇಡುವ ಬದಲು ಬ್ಯಾಂಕ್ ಲಾಕರ್ ಗಳಲ್ಲಿ ಇಡಬೇಕು. ಪ್ರಮುಖವಾಗಿ ಮದುವೆ ಸಮಾರಂಭಗಳ ಸಂದರ್ಭದಲ್ಲಿ. ಕಳ್ಳತನವಾದಂತಹ ಸಂದರ್ಭದಲ್ಲಿ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಬೇಕೆಂದು ತಿಳಿಸಿದ್ದಾರೆ.