ಸಹಪಾಠಿಗೆ ಗುಂಡಿಕ್ಕಿದ ಐಟಿಐ ವಿದ್ಯಾರ್ಥಿ: ವೈರಲ್ ವಿಡಿಯೋ

ಹರಿಯಾಣದ ಸೋನೆಪತ್‌ ಕೈಗಾರಿಕಾ ತರಬೇತಿ ಸಂಸ್ಥೆ(ಐಟಿಐ)ಯ ವಿದ್ಯಾರ್ಥಿಯೊಬ್ಬ ತನ್ನ ಸಹಪಾಠಿಯ ಮೇಲೆ ತರಗತಿಯಲ್ಲೇ ಗುಂಡು ಹಾರಿಸಿರುವ ಘಟನೆ ಬೆಳಕಿಗೆ ಬಂದಿದೆ,
ಸಹಪಾಠಿಗೆ ಗುಂಡಿಕ್ಕಿದ ಐಟಿಐ ವಿದ್ಯಾರ್ಥಿ: ವೈರಲ್ ವಿಡಿಯೋ
ಸಹಪಾಠಿಗೆ ಗುಂಡಿಕ್ಕಿದ ಐಟಿಐ ವಿದ್ಯಾರ್ಥಿ: ವೈರಲ್ ವಿಡಿಯೋ
Updated on
ಚಂಡಿಘರ್: ಹರಿಯಾಣದ ಸೋನೆಪತ್‌ ಕೈಗಾರಿಕಾ ತರಬೇತಿ ಸಂಸ್ಥೆ(ಐಟಿಐ)ಯ ವಿದ್ಯಾರ್ಥಿಯೊಬ್ಬ ತನ್ನ ಸಹಪಾಠಿಯ ಮೇಲೆ ತರಗತಿಯಲ್ಲೇ ಗುಂಡು ಹಾರಿಸಿರುವ ಘಟನೆ ಬೆಳಕಿಗೆ ಬಂದಿದೆ, 
ವಿದ್ಯಾರ್ಥಿಯ ಕೃತ್ಯ ಕೊಠಡಿಯಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಈ ವಿಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್‌ ಆಗಿದೆ.  ಗುಂಡೇಟು ತಿಂದ ವಿದ್ಯಾರ್ಥಿಯನ್ನು ರೋಹ್ಟಕ್‌ನ ಮೆಡಿಕಲ್‌ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ.
t
ಪ್ರಕರಣ ಕುರಿತು ತನಿಖೆ ನಡೆಸುತ್ತಿರುವ ಸೋನೆಪತ್‌ನ ಡೆಪ್ಯುಟಿ ಸುಪರಿಂಟೆಂಡೆಂಟ್‌ ಆಫ್‌ ಪೊಲೀಸ್‌ ರಾಹುಲ್‌ ದೇವ್‌ ಅವರು, ‘ಸಿಸಿಟಿವಿಯಲ್ಲಿ ಘಟನೆ ಸೆರೆಯಾಗಿದೆ. ಸಹಪಾಠಿಗಳ ಜತೆ ಮಾತನಾಡುತ್ತಿದ್ದ ವಿದ್ಯಾರ್ಥಿಯ ಮೇಲೆ ಹಿಂದಿನಿಂದ ಬಂದ ಇಬ್ಬರು ವಿದ್ಯಾರ್ಥಿಗಳು ಗುಂಡಿನ ದಾಳಿ ನಡೆಸಿದ್ದಾರೆ" ಎಂದರು .
ತಮ್ಮ ಬ್ಯಾಗ್‌ನಿಂದ ಪಿಸ್ತೂಲ್‌ ತೆಗೆದ ಅವರು ದಾಳಿ ನಡೆಸಿದ ತಕ್ಷಣ ಸ್ಥಳದಿಂದ ಪರಾರಿಯಾಗಿದ್ದಾರೆ
ಕೊಲೆ ಯತ್ನ ಪ್ರಕರಣ ಎಂದು ದೂರು ದಾಖಲಿಸಿಕೊಂಡಿರುವ ಪೊಲೀಸರು ತಲೆ ಮರೆಸಿಕೊಂಡಿರುವ ವಿದ್ಯಾರ್ಥಿಗಳಿಗಾಗಿ ಹುಡುಕಾಟ ಆರಂಭಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com