ಡೆಹರಾಡೂನ್: ಲೆಫ್ಟಿನೆಂಟ್ ಜನರಲ್ ಸಂಜಯ್ ಕುಮಾರ್ ಝಾ ಇಂದು ಪ್ರತಿಷ್ಠಿತ ಇಂಡಿಯನ್ ಮಿಲಿಟರಿ ಅಕಾಡಮಿಯ (ಐಎಂಎ) 48 ನೇ ಕಮಾಂಡೆಂಟ್ ಆಗಿ ನೇಮಕಗೊಂಡಿದ್ದಾರೆ.
ಲೆಫ್ಟಿನೆಂಟ್ ಜನರಲ್ ಝಾ, ರಾಷ್ಟ್ರೀಯ ರಕ್ಷಣಾ ಅಕಾಡೆಮಿ ಮತ್ತು ಐಎಂಎಯ ಓರ್ವ ಹಳೆಯ ವಿದ್ಯಾರ್ಥಿಯಾಗಿದ್ದು, ಡಿಸೆಂಬರ್ 13, 1980 ರಂದು ಸಿಖ್ ರೆಜಿಮೆಂಟ್ 17 ನೇ ಬೆಟಾಲಿಯನ್ನಲ್ಲಿ ನೇಮಕವಾಗಿದ್ದರು.
36 ವರ್ಷಗಳಿಗಿಂತಲೂ ಹೆಚ್ಚು ಕಾಲದ ವೃತ್ತಿಜೀವನದಲ್ಲಿ, ಹಲವಾರುಮಹತ್ವದ ಅಧಿಕಾರ ಸ್ಥಾನಗಳನ್ನು ಹೊಂದಿದ್ದ ಝಾ ಅವರು ರಾಷ್ಟ್ರೀಯ ರೈಫಲ್ಸ್ ಬೆಟಾಲಿಯನ್, ಅಸ್ಸಾಂ ರೈಫಲ್ಸ್ ಸೆಕ್ಟರ್ ಮತ್ತು ಈಶಾನ್ಯದ ಪರ್ವತ ವಿಭಾಗಗಳನ್ನು ನಿರ್ವಹಿಸಲಿದ್ದಾರೆ