ಅಂತರ್ಜಾಲದಲ್ಲಿ ಟ್ರಾಲ್ ಮಾಡುವುದನ್ನು ಬೆಂಬಲಿಸುವುದಿಲ್ಲ, ಅದು ನಮ್ಮ ಸಂಸ್ಕೃತಿಯಲ್ಲ: ಮೋಹನ್ ಭಾಗವತ್

ಅಂತರ್ಜಾಲದಲ್ಲಿ ಟ್ರಾಲ್ ಮಾಡುವ ಸಿದ್ಧಾಂತ ಹಾಗೂ ಆಕ್ರಮಣಕಾರಿ ವರ್ತನೆ ತೋರುವುದನ್ನು ನಾವು ಎಂದಿಗೂ ಬೆಂಬಲಿಸುವುದಿಲ್ಲ ಎಂದು ರಾಷ್ಟ್ರೀಯ ಸ್ವಯಂ ಸೇವಕ (ಆರ್'ಎಸ್ಎಸ್) ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಅವರು...
ರಾಷ್ಟ್ರೀಯ ಸ್ವಯಂ ಸೇವಕ (ಆರ್'ಎಸ್ಎಸ್) ಸಂಘದ ಮುಖ್ಯಸ್ಥ ಮೋಹನ್ ಭಾಗವತ್
ರಾಷ್ಟ್ರೀಯ ಸ್ವಯಂ ಸೇವಕ (ಆರ್'ಎಸ್ಎಸ್) ಸಂಘದ ಮುಖ್ಯಸ್ಥ ಮೋಹನ್ ಭಾಗವತ್
Updated on: 
ನವದೆಹಲಿ: ಅಂತರ್ಜಾಲದಲ್ಲಿ ಟ್ರಾಲ್ ಮಾಡುವ ಸಿದ್ಧಾಂತ ಹಾಗೂ ಆಕ್ರಮಣಕಾರಿ ವರ್ತನೆ ತೋರುವುದನ್ನು ನಾವು ಎಂದಿಗೂ ಬೆಂಬಲಿಸುವುದಿಲ್ಲ ಎಂದು ರಾಷ್ಟ್ರೀಯ ಸ್ವಯಂ ಸೇವಕ (ಆರ್'ಎಸ್ಎಸ್) ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಅವರು ಮಂಗಳವಾರ ಹೇಳಿದ್ದಾರೆ. 
ಇಂಡಿಯಾ ಫೌಂಡೇಶನ್ ಕಾರ್ಯಕ್ರಮದಲ್ಲಿ ವಿದೇಶಿ ರಾಯಭಾರಿ ಅಧಿಕಾರಿಗಳನ್ನುದ್ದೇಶಿಸಿ ಮಾತನಾಡಿರುವ ಅವರು, ಅಂತರ್ಜಾಲಗಳಲ್ಲಿ ಟ್ರೋಲ್ ಮಾಡುವುದು ಹಾಗೂ ಆಕ್ರಮಣಕಾರಿಯಾಗಿ ವರ್ತನೆಗಳನ್ನು ತೋರುವುದನ್ನು ನಾವು ಎಂದಿಗೂ ಬೆಂಬಲಿಸುವುದಿಲ್ಲ. ತಾರತಮ್ಯಗಳಿಗಿಲ್ಲಿ ಜಾಗವಿಲ್ಲ. ರಾಷ್ಟ್ರದ ಏಕತೆ ಹಾಗೂ ವಿಶ್ವದ ಏಕತೆಯೇ ನಮ್ಮಗುರಿ ಎಂದು ಹೇಳಿದ್ದಾರೆ. 
ಇತ್ತೀಚಿನ ದಿನಗಳಲ್ಲಿ ಸೈಬರ್ ಅಪರಾಧ ಪ್ರಕರಣಗಳು ಹೆಚ್ಚಾಗಿದ್ದು, ಯುವಕರು ಹಾಗೂ ಚಿಕ್ಕ ಮಕ್ಕಳೇ ಹೆಚ್ಚಾಗಿ ಭಾಗಿಯಾಗುತ್ತಿದ್ದಾರೆ. ಇನ್ನು ಅಂತರ್ಜಾಲಗಳಲ್ಲಿ ಟ್ರೋಲ್ ಮಾಡುವುದು ಸಾಮಾನ್ಯವಾಗಿ ಹೋಗಿದೆ. ರಾಜಕೀಯ ವಿಷಯವೊಂದನ್ನು ಹಿಡಿದು ರಾಜಕೀಯ ಪಕ್ಷವೊಂದನ್ನು ಟ್ರೋಲ್ ಮಾಡಲಾಗುತ್ತಿದೆ. ಇಂತಹ ವರ್ತನೆಗಳನ್ನು ನಾವು ಬೆಂಬಲಿಸುವುದಿಲ್ಲ ಎಂದು ತಿಳಿಸಿದ್ದಾರೆ. 
ಇದೇ ವೇಳೆ ಬಿಜೆಪಿ ಪಕ್ಷವನ್ನು ಆರ್'ಎಸ್ಎಸ್ ನಡೆಸುತ್ತಿದೆ ಎಂಬು ಆರೋಪಗಳಿಗೆ ಸ್ಪಷ್ಟನೆ ನೀಡಿರುವ ಅವರು, ಸಂಘ ಪರಿವಾರ ಬಿಜೆಪಿಯನ್ನು ನಡೆಸುತ್ತಿಲ್ಲ. ಬಿಜೆಪಿ ಸಂಘ ಪರಿವಾರವನ್ನು ನಡೆಸುತ್ತಿಲ್ಲ. ನಾವು ಸ್ವಯಂ ಸೇವಕರಷ್ಟೇ. ಯಾವುದೇ ವಿಚಾರವಾಗಿ ಆದರೂ ನಿರ್ಧಾರ ಕೈಗೊಂಡು ಅವರನ್ನು ಕಾರ್ಯಗತಗೊಳಿಸುತ್ತೇವೆ. ನಾವು ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತಿದ್ದೇವೆ ಎಂದಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com