ಎನ್ ಐಎ ನೂತನ ನಿರ್ದೇಶಕರಾಗಿ ವೈಸಿ ಮೋದಿ ನೇಮಕ!

ರಾಷ್ಟ್ರೀಯ ತನಿಖಾ ದಳ (ಎನ್ ಐಎ)ದ ನೂತನ ನಿರ್ದೇಶಕರಾಗಿ ವೈಸಿ ಮೋದಿ ಅವರನ್ನು ಸೋಮವಾರ ನೇಮಕ ಮಾಡಲಾಗಿದೆ.
ವೈಸಿ ಮೋದಿ (ಸಂಗ್ರಹ ಚಿತ್ರ)
ವೈಸಿ ಮೋದಿ (ಸಂಗ್ರಹ ಚಿತ್ರ)

ನವದೆಹಲಿ: ರಾಷ್ಟ್ರೀಯ ತನಿಖಾ ದಳ (ಎನ್ ಐಎ)ದ ನೂತನ ನಿರ್ದೇಶಕರಾಗಿ ವೈಸಿ ಮೋದಿ ಅವರನ್ನು ಸೋಮವಾರ ನೇಮಕ ಮಾಡಲಾಗಿದೆ.

ಹಾಲಿ ನಿರ್ದೇಶಕ ಶರದ್ ಕುಮಾರ್ ಅವರು 2018ರ ಅಕ್ಟೋಬರ್ 30ರಂದು ನಿವೃತ್ತರಾಗುತ್ತಿರುವ ಹಿನ್ನಲೆಯಲ್ಲಿ ಕೇಂದ್ರ ಗೃಹ ಇಲಾಖೆ ವೈಸಿ ಮೋದಿ ಅವರನ್ನು ನೇಮಕ ಮಾಡಿ ಇಂದು ಆದೇಶ ಹೊರಡಿಸಿದೆ. 2002ರ ಗುಜರಾತ್  ಗಲಭೆ ಪ್ರಕರಣದ ತನಿಖೆಗಾಗಿ ಸುಪ್ರೀಂಕೋರ್ಟ್ ನೇಮಿಸಿದ್ದ ವಿಶೇಷ ತನಿಖಾದಳ ನೇತೃತ್ವವನ್ನು ಇದೇ ವೈಸಿ ಮೋದಿ ಅವರಿಗೆ ವಹಿಸಲಾಗಿತ್ತು. ಈ ಹಿಂದೆ 2015ರಲ್ಲಿ ಕೇಂದ್ರೀಯ ತನಿಖಾ ದಳ (ಸಿಬಿಐ)ದ ಹೆಚ್ಚುವರಿ  ನಿರ್ದೇಶಕರಾಗಿ ವೈಸಿ ಮೋದಿ ನೇಮಕವಾಗಿದ್ದರು.

ತಮ್ಮ ದಕ್ಷತೆ ಹಾಗೂ ಪಾರದರ್ಶಕ ತನಿಖೆಯಿಂದ ಖ್ಯಾತಿಗಳಿಸಿದ್ದ ವೈಸಿ ಮೋದಿ ಅವರ ಹೆಗಲಿಗೆ ಇದೀಗ ರಾಷ್ಟ್ರೀಯ ತನಿಖಾದಳದ ನಿರ್ದೇಶಕತ್ವ ನೀಡಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com