ಪೆಟ್ರೋಲ್ ದರ ಇಳಿಕೆಯಾಗುತ್ತಿದೆ: ಸಚಿವ ಧರ್ಮೇಂದ್ರ ಪ್ರಧಾನ್

ಅಮೆರಿಕದಲ್ಲಿ ಅಪ್ಪಳಿಸಿದ್ದ ಇರ್ಮಾ ಹಾಗೂ ಹಾರ್ವೆ ಚಂಡಮಾರುತಗಳ ಪರಿಣಾಮ ತೈಲ ಬೆಲೆ ಏರಿಕೆಯಾಗಿತ್ತು, ಇದೀಗ ಪೆಟ್ರೋಲ್ ದರ ಇಳಿಕೆಯಾಗುತ್ತಿದೆ ಎಂದು ಪೆಟ್ರೋಲಿಯಂ ಖಾತೆ ಸಚಿವ ಧರ್ಮೇಂದ್ರ ಪ್ರಧಾನ್ ಅವರು...
ಪೆಟ್ರೋಲಿಯಂ ಖಾತೆ ಸಚಿವ ಧರ್ಮೇಂದ್ರ ಪ್ರಧಾನ್
ಪೆಟ್ರೋಲಿಯಂ ಖಾತೆ ಸಚಿವ ಧರ್ಮೇಂದ್ರ ಪ್ರಧಾನ್
Updated on: 
ನವದೆಹಲಿ: ಅಮೆರಿಕದಲ್ಲಿ ಅಪ್ಪಳಿಸಿದ್ದ ಇರ್ಮಾ ಹಾಗೂ ಹಾರ್ವೆ ಚಂಡಮಾರುತಗಳ ಪರಿಣಾಮ ತೈಲ ಬೆಲೆ ಏರಿಕೆಯಾಗಿತ್ತು, ಇದೀಗ ಪೆಟ್ರೋಲ್ ದರ ಇಳಿಕೆಯಾಗುತ್ತಿದೆ ಎಂದು ಪೆಟ್ರೋಲಿಯಂ ಖಾತೆ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಶನಿವಾರ ಹೇಳಿದ್ದಾರೆ. 
ತೈಲ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವ ಹಿನ್ನಲೆಯಲ್ಲಿ ರಾಷ್ಟ್ರವ್ಯಾಪ್ತಿ ಪ್ರತಿಭಟನೆಗಳ ಕೂಗು ಕೇಳಿಬರುತ್ತಿರುವ ಹಿನ್ನಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ಪೆಟ್ರೋಲ್ ದರ ಈಗಾಗಲೇ ಕಡಿಮೆಯಾಗುತ್ತಿದೆ. ಕಳೆದೆರಡು ದಿನಗಳಿಂದ ಪೆಟ್ರೋಲ್ ದರ ಇಳಿಕೆ ಕಂಡಿದೆ ಎಂದು ಹೇಳಿದ್ದಾರೆ. 
ಅಮೆರಿಕವನ್ನು ಅಪ್ಪಳಿಸಿದ ಇರ್ಮಾ ಮತ್ತು ಹಾರ್ವೆ ಚಂಡಮಾರುತಗಳ ಪರಿಣಾಮದಿಂದ ತೈಲ ಬೆಲೆ ಏರಿಕೆಯಾಗಿದೆ. ತೈಲ ಬೆಲೆಯಲ್ಲಿ ಶೇ.20ರಷ್ಟು ಏರಿಕೆಯಾಗಿದ್ದು. ಇದು ತಾತ್ಕಾಲಿಕವಷ್ಟೇ. ಆದರೆ, ಜನರು ಭರಿಸಲಾಗದ ಮಟ್ಟಕ್ಕೆ ಏರಿಕೆಯಾಗಿವಲ್ಲ. ತೈಲ ಬೆಲೆಗಳ ನಿತ್ಯದ ಪರಿಷ್ಕರಣೆ ವಿಚಾರದಲ್ಲಿ ಕೇಂದ್ರ ಮಧ್ಯಪ್ರವೇಶ ಮಾಡುವುದಿಲ್ಲ ಎಂದು ತಿಳಿಸಿದ್ದಾರೆ. 
ಇದೇ ವೇಳೆ ಪೆಟ್ರೋಲ್ ಉತ್ಪನ್ನಗಳ ಮೇಲೆ ಜಿಎಸ್'ಟಿ ಹೇರಲಾಗುವ ಕುರಿತಂತೆ ಮಾತನಾಡಿರುವ ಅವರು, ಏಕರೂಪ ತೈಲ ದರ ನಿಗದಿಯಾಗಬೇಕಾದರೆ, ಪೆಟ್ರೋಲಿಯಂ ಉತ್ಪನ್ನಗಳು ಸರಕು ಮತ್ತು ಸೇವಾ ತೆರಿಗೆ ವ್ಯಾಪ್ತಿಗೆ ಬರಬೇಕು. 
ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ಜಿಎಸ್'ಟಿ ಹೇರುವಂತೆ ಈಗಾಗಲೇ ಜಿಎಸ್'ಟಿ ಮಂಡಳಿಗೆ ಮನವಿ ಸಲ್ಲಿಸಿದ್ದೇವೆ. ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ಜಿಎಸ್ ಟಿ ಹೇರುವಿಕೆ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಹಿತಾಸಕ್ತಿಗಳಿಗೆ ಬಿಟ್ಟದ್ದಾಗಿದೆ. ರಾಜ್ಯಗಳೂ ಕೂಡ ಸಮತೋಲಿತ ಮಾದರಿಗಳನ್ನು ಹೊಂದಬೇಕಿದ್ದು, ಇದರಿಂದ ಜನರ ಮೇಲೆ ಯಾವುದೇ ರೀತಿಯ ಒತ್ತಡಗಳು ಹಾಗೂ ಸಮಸ್ಯೆಗಳಾಗದಂತೆ ತೆರಿಗೆಯನ್ನು ಸಂಗ್ರಹಿಸಬಹುದು ಎಂದಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com