ಶ್ರೀನಗರ: ನಿಗೂಢವಾಗಿ ಮಹಿಳೆಯರ ಜಡೆ ಕತ್ತರಿಸುವ ಪ್ರಕರಣಗಳನ್ನು ವಿರೋಧಿಸಿ ಜಮ್ಮು ಮತ್ತು ಕಾಶ್ಮೀರದ ಕುಲ್ಗಂನಲ್ಲಿ ಬಂದ್ ಆಚರಿಸಲಾಯಿತು.
ಕಳೆದ 15 ದಿನಗಳಲ್ಲಿ ಕುಲ್ಗಂ ಜಿಲ್ಲೆಯಲ್ಲಿ 6 ಮಹಿಳೆಯರ ಜಡೆ ಕತ್ತರಿಸಿರುವ ಪ್ರಕರಣಗಳು ಬೆಳಕಿಗೆ ಬಂದಿದ್ದು ಈ ಹಿನ್ನೆಲೆಯಲ್ಲಿ ಕುಲ್ಗಂನಲ್ಲಿ ಬಂದ ಆಚರಿಸಲಾಯಿತು. ಬಂದ್ ಹಿನ್ನಲೆ ಕುಲ್ಗಂ ಹಾಗೂ ಸುತ್ತಲಿನ ಗ್ರಾಮಗಳಲ್ಲಿ ಮಾರುಕಟ್ಟೆ, ಸಾರಿಗೆ ಹಾಗೂ ಇತರೆ ವ್ಯವಹಾರಗಳು ಸಂಪೂರ್ಣವಾಗಿ ಸ್ಥಗಿತಗೊಂಡಿದ್ದವು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಮೊಹಬೂಬ್ ಮುಫ್ತಿ ಅವರು ವಿಶೇಷ ತನಿಖಾ ತಂಡವನ್ನು ರಚಿಸಿದ್ದಾರೆ.
ಸಂತ್ರಸ್ತ ಮಹಿಳೆಯರ ಪ್ರಕಾರ ತಮ್ಮ ಜಡೆ ಕಟ್ ಆಗುವ ಮುನನ ತಾತ್ಕಾಲಿಕವಾಗಿ ಪ್ರಜ್ಞೆ ತಪ್ಪುತ್ತೇವೆ. ಕೆಲ ಹೊತ್ತಿನ ಬಳಿಕ ಪ್ರಜ್ಞೆ ಬಂದಾಗ ಜಡೆ ಕತ್ತರಿಸಲ್ಪಟ್ಟಿರುತ್ತದೆ ಎಂದು ಸಂತ್ರಸ್ತ ಮಹಿಳೆಯರು ಹೇಳಿದ್ದಾರೆ.