ಇಂಫಾಲ: ಮಣಿಪುರದಲ್ಲಿ ಜಾಗತಿಕ ಶಾಂತಿ ಸಮ್ಮೇಳನ ನಡೆಯಲಿದ್ದು ಬೌದ್ಧ ಧರ್ಮ ಗುರು ದಲೈ ಲಾಮ ಮಣಿಪುರದ ಇಂಫಾಲಕ್ಕೆ ಭೇಟಿ ನೀಡಲಿದ್ದಾರೆ.
ದಲೈ ಲಾಮ ಮಣಿಪುರಕ್ಕೆ ಆಗಮಿಸುತ್ತಿರುವುದನ್ನು ಮಣಿಪುರದ ಶಾಸಕ ಖೇಮ್ಚಂದ್ ಸ್ಪಷ್ಟಪಡಿಸಿದ್ದು, ಅ.18 ರಂದು ಜಾಗತಿಕ ಶಾಂತಿ ಸಮ್ಮೇಳನವನ್ನುದ್ದೇಶಿಸಿ ಮಾತನಾಡಲಿದ್ದಾರೆ. ಸಮ್ಮೇಳನದಲ್ಲಿ ಧಾರ್ಮಿಕ ನಾಯಕರು ಮಾತನಾಡಲಿದ್ದಾರೆ ಎಂದು ಶಾಸಕರು ಮಾಹಿತಿ ನೀಡಿದ್ದಾರೆ.
ದಲೈ ಲಾಮ ಅವರನ್ನು ಕಳೆದ ಬಾರಿ ಭೇಟಿ ಮಾಡಿದ್ದಾಗ ಮಣಿಪುರಕ್ಕೆ ಭೇಟಿ ನೀಡುವಂತೆ ಮನವಿ ಮಾಡಿದ್ದೆ, ಆಹ್ವಾನಕ್ಕೆ ದಲೈ ಲಾಮ ಒಪ್ಪಿದ್ದರು ಎಂದು ಖೇಮ್ಚಂದ್ ಹೇಳಿದ್ದಾರೆ.