ದೇಶ

ಕೆಲಸ ಇಲ್ಲ, ವೋಟ್ ಇಲ್ಲ: ಪ್ರಧಾನಿ ಮೋದಿಗೆ ರಾಜಸ್ತಾನದ ಹಳ್ಳಿಗರ ಎಚ್ಚರಿಕೆ

Published On :
ಕಸ್ಬಾ ಬೊನ್ಲಿ(ರಾಜಸ್ತಾನ): ಭರವಸೆಯಂತೆ ಉದ್ಯೋಗವಕಾಶಗಳನ್ನು ಸೃಷ್ಟಿಸುವಲ್ಲಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ವಿಫಲವಾಗಿದ್ದು ಈ ಹಿನ್ನೆಲೆಯಲ್ಲಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮೋದಿ ಅವರಿಗೆ ಮತ ನೀಡುವುದಿಲ್ಲ ಎಂದು ರಾಜಸ್ತಾನದ ಕಸ್ಬಾ ಬೊನ್ಲಿ ಗ್ರಾಮದವರು ಎಚ್ಚರಿಕೆ ನೀಡಿದ್ದಾರೆ.  
ಕಸ್ಬಾ ಬೊನ್ಲಿ ಸಣ್ಣ ಗ್ರಾಮದ 31 ವರ್ಷದ ರಾಕೇಶ್ ಕುಮಾರ್ ಪೈಂಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ಎಂಟು ಮಂದಿ ಒಡಹುಟ್ಟಿದವರ ಪೈಕಿ ಇವರೊಬ್ಬರು ಮಾತ್ರ ಸ್ನಾತಕೋತ್ತರ ಪದವಿ ಪಡೆದಿದ್ದು ಆದರೂ ಸಹ ಸಂಬಳದ ಕೆಲಸ ಪಡೆಯುವಲ್ಲಿ ವಿಫಲರಾಗಿದ್ದಾರೆ. 
2014ರ ಲೋಕಸಭಾ ಚುನಾವಣೆಯಲ್ಲಿ ನಾನು ಮೋದಿ ಅವರಿಗೆ ಮತ ಹಾಕಿದ್ದೆ. ಉದ್ಯೋಗವಕಾಶಗಳನ್ನು ಸೃಷ್ಟಿಸುತ್ತಾರೆ ಎಂಬ ನಂಬಿಕೆ ಇತ್ತು ಆದರೆ ಅದು ಸಾಧ್ಯವಾಗಿಲ್ಲ. ನನಗೆ ಕೆಲಸ ಸಿಕ್ಕದ ಮೇಲೆ ನಾನು ಮತ್ತೆ ಅವರಿಗೆ ಮತ ನೀಡುವುದಿಲ್ಲ ಎಂದು ರಾಕೇಶ್ ಕುಮಾರ್ ಹೇಳಿದ್ದಾರೆ. 
ಯುವಕರಿಗೆ ದೇಶದಲ್ಲಿ ಉದ್ಯೋಗವಕಾಶ ಸೃಷ್ಟಿಸುವಲ್ಲಿ ಮೋದಿ ಸರ್ಕಾರ ವಿಫಲವಾಗಿದೆ. ಮೋದಿ ಅವರ ಮೇಲೆ ಬಹುದೊಡ್ಡ ನಿರೀಕ್ಷೆಗಳನ್ನು ಇಟ್ಟುಕೊಂಡು ಕಳೆದ ಬಾರಿ ನಾವು ಬಿಜೆಪಿಗೆ ಮತ ಹಾಕಿದ್ದೇವು. ಆದರೆ ದೇಶದಲ್ಲಿ ಉದ್ಯೋಗವಕಾಶಗಳನ್ನು ಸೃಷ್ಟಿಸುವಲ್ಲಿ ಸರ್ಕಾರ ಸಂಪೂರ್ಣವಾಗಿದೆ ವಿಫಲವಾಗಿದೆ ಎಂದರು.
ಇನ್ನು ಇದೇ ಹಳ್ಳಿಯ ರೈತರ ಮುಖಂಡರಾಗಿರುವ ಹನುಮಾನ್ ಪ್ರಸಾದ್ ಮೀನಾ ಅವರು ನನ್ನ ಇಬ್ಬರು ಮಕ್ಕಳು ಪದವಿದರರು ಆದರೆ ನಿರುದ್ಯೋಗಿಗಳು. ಕಳೆದ ಬಾರಿ ಮೋದಿ ಅವರಿಗೆ ಹಲವು ರೈತರು ಮತ ನೀಡಿದ್ದರು ಆದರೆ ಈ ಬಾರಿ ಮತ ಹಾಕುವುದಿಲ್ಲ ಎಂದು ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.