ಉನ್ನಾವೋ ಅತ್ಯಾಚಾರ: ಆರೋಪಿ ಶಾಸಕ 7 ದಿನ ಸಿಬಿಐ ವಶಕ್ಕೆ

ಉನ್ನಾವೊ ಅತ್ಯಾಚಾರ ಪ್ರಕರಣ ಸಂಬಂಧ ಸಿಬಿಐ ನಿಂದ ಬಂಧಿಸಲ್ಪಟ್ಟಿದ್ದ ಬಿಜೆಪಿ ಶಾಸಕ ಕುಲದೀಪ್ ಸಿಂಗ್ ಸೆಂಗರ್ ಅವರನ್ನು ಏಳು ದಿನಗಳ ಕಾಲ ಪೋಲೀಸ್ ವಶಕ್ಕೆ ಒಪ್ಪಿಸಲಾಗಿದೆ.
ಉನ್ನಾವೋ ಅತ್ಯಾಚಾರ: ಆರೋಪಿ ಶಾಸಕ  7 ದಿನ ಸಿಬಿಐ ವಶಕ್ಕೆ
ಉನ್ನಾವೋ ಅತ್ಯಾಚಾರ: ಆರೋಪಿ ಶಾಸಕ 7 ದಿನ ಸಿಬಿಐ ವಶಕ್ಕೆ
Updated on: 
ನವದೆಹಲಿ: ಉನ್ನಾವೊ ಅತ್ಯಾಚಾರ ಪ್ರಕರಣ ಸಂಬಂಧ ಸಿಬಿಐ ನಿಂದ ಬಂಧಿಸಲ್ಪಟ್ಟಿದ್ದ ಬಿಜೆಪಿ ಶಾಸಕ ಕುಲದೀಪ್ ಸಿಂಗ್ ಸೆಂಗರ್  ಅವರನ್ನು 7 ದಿನಗಳ ಕಾಲ ಪೋಲೀಸ್ ವಶಕ್ಕೆ ಒಪ್ಪಿಸಲಾಗಿದೆ.
ಆರೋಪಿ ಶಾಸಕನನ್ನು ಸಿಬಿಐ ಪೋಲೀಸರು ಇಂದು ಲಖನೌ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಶಾಸಕನನ್ನು 7 ದಿನಗಳ ಕಾಲ ಪೋಲೀಸ್ ವಶಕ್ಕೆ ನಿಡಿ ಕೋರ್ಟ್ ಆದೇಶಿಸಿದೆ.
ಇದೇ ವೇಳೆ ಸಿಬಿಐ ಕಛೇರಿಗೆ ಆಗಮಿಸಿದ್ದ ಅತ್ಯಾಚಾರ ಸಂತ್ರಸ್ತೆಯನ್ನು ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಗೆ ದಾಖಲಿಸಿದ್ದು ವೈದ್ಯಕೀಯ ಪರೀಕ್ಷೆ ನಡೆಸಲಾಗುತ್ತಿದೆ.
ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಶುಕ್ರವಾರ ಕೇಂದ್ರೀಯ ತನಿಖಾದಳ ಆರೋಪಿ .ಸೆಂಗರ್  ಅವರನ್ನು ಬಂಧಿಸಿತ್ತು. ಐಪಿಸಿ ಸೆಕ್ಷನ್ ಸೆಕ್ಷನ್ 363 (ಅಪಹರಣ), 366 (ಮಹಿಳೆಯ ಅಪಹರಣ), 376 (ಅತ್ಯಾಚಾರ), 506 (ಕ್ರಿಮಿನಲ್ ಬೆದರಿಕೆ) ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಸ್ಕೋ) ಕಾಯ್ದೆಯಡಿಯಲ್ಲಿ ಶಾಸಕರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com