ಉತ್ತರ ಪ್ರದೇಶದ ಇಟಾವಾದಲ್ಲಿ ಗುಂಡಿಕ್ಕಿ ಅಪ್ರಾಪ್ತ ಸಹೋದರಿಯರ ಹತ್ಯೆ

ಉತ್ತರ ಪ್ರದೇಶದ ಉನ್ನಾವೊದಲ್ಲಿನ ಬಾಲಕಿ ಮೇಲಿನ ಅತ್ಯಾಚಾರ ಪ್ರಕರಣ ಎಲ್ಲೆಡೆ ಆಕ್ರೋಶಕ್ಕೆ ಕಾರಣವಾಗಿರುವ ಬೆನ್ನಲ್ಲೇ ಇಟಾವಾದಲ್ಲಿ ಇಂದು ಬೆಳಗ್ಗೆ ಇಬ್ಬರು ಬಾಲಕಿಯರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಇಟಾವಾ : ಉತ್ತರ ಪ್ರದೇಶದ ಉನ್ನಾವೊದಲ್ಲಿನ ಬಾಲಕಿ ಮೇಲಿನ  ಅತ್ಯಾಚಾರ ಪ್ರಕರಣ ಎಲ್ಲೆಡೆ ಆಕ್ರೋಶಕ್ಕೆ ಕಾರಣವಾಗಿರುವ ಬೆನ್ನಲ್ಲೇ  ಇಟಾವಾದಲ್ಲಿ  ಇಂದು ಬೆಳಗ್ಗೆ ಅಪ್ರಾಪ್ತ ವಯಸ್ಸಿನ ಸಹೋದರಿಯರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.

 ಮೃತ ಬಾಲಕಿಯರನ್ನು  ಸಂಧ್ಯಾ (17) ಮತ್ತು ಆಕೆಯ ತಂಗಿ ಶಾಲು (13) ಎಂದು ಗುರುತಿಸಲಾಗಿದೆ.  ಕೆಲಮಾವು ಗ್ರಾಮದ ರಾಮ ಕಿಶೋರ್ ಎಂಬವರ ಮಕ್ಕಳಾಗಿದ್ದಾರೆ.

ಹೊಲದಲ್ಲಿ ಬಿದ್ದಿದ್ದ   ಈ ಬಾಲಕಿಯರ ಮೃತದೇಹವನ್ನು ಕಂಡುಹಿಡಿದ ಗ್ರಾಮಸ್ಥರು  ಪೊಲೀಸರಿಗೆ ಮಾಹಿತಿ ಸುದ್ದಿ ಮುಟ್ಟಿಸಿದ್ದಾರೆ. ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ  ರವಾನಿಸಿದ್ದಾರೆ.

 ಈ ಇಬ್ಬರು ಬಾಲಕಿಯರ  ಮೇಲೆ ಅತ್ಯಾಚಾರ ನಡೆದಿರುವ ಬಗ್ಗೆ ಗ್ರಾಮಸ್ಥರು ಶಂಕೆ ವ್ಯಕ್ತಪಡಿಸಿದ್ದಾರೆ.

ಮೃತದೇಹಗಳಿದ್ದ ಸ್ಥಳದಲ್ಲಿ  ಬಿದ್ದಿದ್ದ ಬುಲೆಟ್ ಮತ್ತು ಚಪ್ಪಲಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ತನಿಖೆ ಆರಂಭಿಸಲಾಗಿದೆ ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಕುಮಾರ್ ತ್ರಿಪಾಠಿ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com