ಪ್ರಧಾನಿ ಮೋದಿ ಬ್ಯಾಂಕಿಂಗ್ ವ್ಯವಸ್ಥೆಯನ್ನು ಹಾಳುಮಾಡಿದ್ದಾರೆ: ರಾಹುಲ್

ಪ್ರಧಾನಿ ನರೇಂದ್ರಮೋದಿ ದೇಶದಲ್ಲಿನ ಬ್ಯಾಂಕಿಂಗ್ ವ್ಯವಸ್ಥೆಯನ್ನು ಹಾಳು ಮಾಡಿದ್ದಾರೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ದೇಶದಲ್ಲಿನ ಬ್ಯಾಂಕಿಂಗ್ ವ್ಯವಸ್ಥೆಯನ್ನು ಹಾಳು ಮಾಡಿದ್ದಾರೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಆರೋಪಿಸಿದ್ದಾರೆ.

ನೀರವ್ ಮೋದಿ 30 ಸಾವಿರ ಕೋಟಿ  ರೂ ಜತೆ ವಿದೇಶಕ್ಕೆ ಹಾರಿದ್ದರೂ ಪ್ರಧಾನಿ ನರೇಂದ್ರಮೋದಿ ಏನೂ ಮಾತನಾಡುತ್ತಿಲ್ಲ. ಸಾರ್ವಜನಿಕರ ಜೇಬಿನಿಂದ  1 ಸಾವಿರ ಹಾಗೂ 500 ರೂ. ನೋಟುಗಳನ್ನು   ದೋಚಿ ನೀರವ್ ಮೋದಿ ಜೇಬಿನಲ್ಲಿ ಹಾಕಲಾಗಿದೆ ಎಂದು ಟೀಕಿಸಿದ್ದಾರೆ.
  ಸಂಸತ್ತಿನ ಅಧಿವೇಶನದ ಸಂದರ್ಭದಲ್ಲಿ15 ನಿಮಿಷ ಮಾತ್ರ ಭಾಷಣ ನಡೆದಿದ್ದು, ರಾಫೆಲ್ ಯುದ್ದ ವಿಮಾನ ಖರೀದಿ, ನೀರಾವ್ ಮೋದಿ ಹಗರಣದ ಬಗ್ಗೆ ಪ್ರಧಾನಿ ಏನ್ನನ್ನೂ ಮಾತನಾಡಲಿಲ್ಲ  ಎಂದು ಅವರು  ಹೇಳಿದ್ದಾರೆ.

ಗುಜರಾತ್, ಮಹಾರಾಷ್ಟ್ರ, ಮಧ್ಯಪ್ರದೇಶ, ಬಿಹಾರ,  ಆಂಧ್ರಪ್ರದೇಶ, ತೆಲಂಗಾಣದಲ್ಲಿನ   ನಗದು ಕ್ರಂಚ್ ಪ್ರಕರಣಗಳ ವರದಿಯ ನಂತರ ರಾಹುಲ್ ಗಾಂಧಿ ಈ ರೀತಿಯ ಹೇಳಿಕೆ ನೀಡಿದ್ದಾರೆ.

ದೇಶದಲ್ಲಿನ ನಗದು ಪರಿಷ್ಥತೆಯ ಬಗ್ಗೆ ಪರಾಮರ್ಶೆ ನಡೆಸಲಾಗಿದ್ದು, ದೇಶದಲ್ಲಿ ದೇಶದಲ್ಲಿ ಸಾಕಷ್ಟು ಕರೆನ್ಸಿ ಚಲಾವಣೆಯಲ್ಲಿದ್ದು ಇನ್ನು ತಾತ್ಕಾಲಿಕ ನಗದು ಕೊರತೆ ನಿವಾರಣೆಗೆ ತ್ವರಿತ ಕ್ರಮಕೈಗೊಳ್ಳಲಾಗುವುದು ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ  ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com