ಅಮೇಥಿ: 15 ವರ್ಷಗಳಲ್ಲಿ ಅಮೇಥಿ ಸಿಂಗಾಪುರ ಹಾಗೂ ಕ್ಯಾಲಿಫೋರ್ನಿಯಾದಂತೆ ಅಭಿವೃದ್ಧಿಗೊಳ್ಳುವುದು ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ಮಂಗಳವಾರ ಹೇಳಿದ್ದಾರೆ.
ಸ್ವಕ್ಷೇತ್ರ ಅಮೇಥಿಯಲ್ಲಿ ಶಾಲೆಯೊಂದನ್ನು ಉದ್ಘಾಟಿಸಿದ ಬಳಿಕ ಮಾತನಾಡಿರುವ ಅವರು, ಮುಂದಿನ 10-15 ವರ್ಷಗಳಲ್ಲಿ ಸಿಂಗಾಪುರ ಹಾಗೂ ಕ್ಯಾಲಿಫೋರ್ನಿಯಾದಂತೆ ಅಮೇಥಿ ಹೆಸರನ್ನೂ ಅದೇ ರೀತಿ ಹೇಳುವರು ಎಂದು ಹೇಳಿದ್ದಾರೆ.
ಇದೇ ವೇಳೆ ಕೇಂದ್ರ ಸರ್ಕಾರ ಹಾಗೂ ಉತ್ತರಪ್ರದೇಶ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಅವರು, ಅಮೇಥಿಯಲ್ಲಿ ನಡೆಯಬೇಕಿರುವ ದೊಡ್ಡ ದೊಡ್ಡ ಯೋಜನಾ ಕಾರ್ಯಕ್ರಮಗಳಿಗೆ ಅಡ್ಡಿಯುಂಟು ಮಾಡುತ್ತಿದ್ದಾರೆಂದು ಆರೋಪ ಮಾಡಿದ್ದಾರೆ.
ಮುಂದಿನ ವರ್ಷಗಳಲ್ಲಿ ಅಮೇಥಿ ವಿಶ್ವದಲ್ಲಿಯೇ ಅತ್ಯುತ್ತಮ ಶಿಕ್ಷಣ ಕೇಂದ್ರವಾಗಲಿದೆ. ಇದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.