'ಹಿಂದೂ ಮಹಾಸಾಗರ ಪ್ರದೇಶ ಪ್ರವೇಶಿಸಿದ ಚೀನಾ ಯುದ್ಧನೌಕೆಗಳಿಗೆ ಸ್ವಾಗತ’: ಚೀನಾಗೆ ನೌಕಾಪಡೆ ತಪರಾಕಿ!

ನೆರೆ ರಾಷ್ಟ್ರಗಳ ಜಲ,- ಭೂ ಪ್ರದೇಶಗಳಲ್ಲಿ ಆಗಾಗ ಪ್ರವೇಶ ಮಾಡುವ ಚಾಳಿ ಹೊಂದಿರುವ ಚೀನಾಗೆ ಭಾರತೀಯ ನೌಕಾ ಪಡೆ ಚಳಿ ಬಿಡಿಸಿದೆ.
'ಹಿಂದೂ ಮಹಾಸಾಗರ ಪ್ರದೇಶ ಪ್ರವೇಶಿಸಿದ ಚೀನಾ ಯುದ್ಧನೌಕೆಗಳಿಗೆ ಸ್ವಾಗತ’: ನೌಕಾಪಡೆಯಿಂದ ಚೀನಾಗೆ ತಪರಾಕಿ!
'ಹಿಂದೂ ಮಹಾಸಾಗರ ಪ್ರದೇಶ ಪ್ರವೇಶಿಸಿದ ಚೀನಾ ಯುದ್ಧನೌಕೆಗಳಿಗೆ ಸ್ವಾಗತ’: ನೌಕಾಪಡೆಯಿಂದ ಚೀನಾಗೆ ತಪರಾಕಿ!
Updated on: 
ನವದೆಹಲಿ: ನೆರೆ ರಾಷ್ಟ್ರಗಳ ಜಲ,- ಭೂ ಪ್ರದೇಶಗಳಲ್ಲಿ ಆಗಾಗ ಪ್ರವೇಶ ಮಾಡುವ ಚಾಳಿ ಹೊಂದಿರುವ ಚೀನಾಗೆ ಭಾರತೀಯ ನೌಕಾ ಪಡೆ ಚಳಿ ಬಿಡಿಸಿದೆ. 
ಹಿಂದೂ ಮಹಾಸಾಗರ ಪ್ರದೇಶವನ್ನು ಪ್ರವೇಶಿಸಿದ ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿಯ ನೌಕೆಗಳನ್ನು ಗಮನಿಸಿರುವ ಭಾರತೀಯ ನೌಕಾಪಡೆ ಟ್ವೀಟ್ ಮಾಡಿದ್ದು, ಚೀನಾದ ಮೂರು ಯುದ್ಧನೌಕೆಗಳಿಗೆ ಸ್ವಾಗತ ಎಂದು ನೌಕಾ ಪಡೆಯ ವಕ್ತಾರರು ಟ್ವೀಟ್ ಮಾಡಿದ್ದಾರೆ. 
ಹಿಂದೂ ಮಹಾಸಾಗರ ಪ್ರದೇಶದಲ್ಲಿ ಚೀನಾ ತನ್ನ ಯುದ್ಧನೌಕೆಗಳು ಹಾಗೂ ಸಬ್ ಮರೀನ್ ಗಳೊಂದಿಗೆ ಪ್ರವೇಶಿಸುತ್ತದೆ. ಹಲವು ಬಾರಿ ಈ ವಿಷಯ ಭಾರತೀಯ ನೌಕಾಪಡೆ ಗಮನಕ್ಕೂ ಬಂದಿದೆ. ಈ ಬಾರಿ ಟ್ವೀಟ್ ಮಾಡಿ ಭಾರತೀಯ ನೌಕಾಪಡೆ ಚೀನಾಗೆ ತಪರಾಕಿ ನೀಡಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com