ಕಥುವಾ ಅತ್ಯಾಚಾರ ಪ್ರಕರಣ: ಮೇ 7ರವರೆಗೆ ವಿಚಾರಣೆ ತಡೆಹಿಡಿದ ಸುಪ್ರೀಂ ಕೋರ್ಟ್

ಕಥುವಾ ಅತ್ಯಾಚಾರ ಪ್ರಕರಣ ವಿಚಾರಣೆಯನ್ನು ಚಂಡೀಗಢಕ್ಕೆ ವರ್ಗಾಯಿಸಬೇಕು, ತನುಇಖೆಯನ್ನು ಖೆ ಸಿಬಿಐಗೆ ಹಸ್ತಾಂತರಿಸಬೇಕು ಎನ್ನುವ ಮನವಿ ಸ್ವೀಕರಿಸಿದ ಸರ್ವೋಚ್ಚ ನ್ಯಾಯಾಲಯ...
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್
Updated on
ನವದೆಹಲಿ: ಕಥುವಾ ಅತ್ಯಾಚಾರ ಪ್ರಕರಣ ವಿಚಾರಣೆಯನ್ನು ಚಂಡೀಗಢಕ್ಕೆ  ವರ್ಗಾಯಿಸಬೇಕು, ತನಿಖೆಯನ್ನು  ಸಿಬಿಐಗೆ ಹಸ್ತಾಂತರಿಸಬೇಕು ಎನ್ನುವ ಮನವಿ ಸ್ವೀಕರಿಸಿದ ಸರ್ವೋಚ್ಚ ನ್ಯಾಯಾಲಯ ಮೇ 7 ರವರೆಗೆ ವಿಚಾರಣೆಗೆ ತಡೆ ನೀಡಿದೆ.
ವಿಚಾರಣೆಯನ್ನು ಚಂಡೀಗಢಕ್ಕೆ  ವರ್ಗಾವಣೆಗೊಳಿಸುವುದು, ಪ್ರಕರಣವನ್ನು ಸಿಬಿಐಗೆ ವಹಿಸುವುದರ ಸಂಬಂಧ ಸಂತ್ರಸ್ತೆಯ ತಂದೆ ಸಲ್ಲಿಸಿದ ಮನವಿಯನ್ನು ನ್ಯಾಯಾಲಯ ಪರಿಶೀಲಿಸಿದೆ ಎಂದು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ, ನ್ಯಾಯಮೂರ್ತಿಗಳಾದ ಡಿ.ವೈ. ಚಂದ್ರಚೂಡ, ಇಂದು ಮಲ್ಹೋತ್ರಾ ಅವರಿದ್ದ ನ್ಯಾಯಪೀಠ ಹೇಳಿದೆ/
ಪ್ರಕರಣದ ಮುಂದಿನ ವಿಚಾರಣೆ ಮೇ 7ರಂದು ನಡೆಯಲಿದೆ.
ಅಲ್ಪಸಂಖ್ಯಾತ ಅಲೆಮಾರಿ ಮುಸ್ಲಿಮ್ ಸಮುದಾಯಕ್ಕೆ ಸೇರಿದ್ದ 8 ವರ್ಷದ ಬಾಲಕಿ ಜಮ್ಮು ಕಾಶ್ಮೀರದ ಕಥುವಾ ಬಳಿ ಹಳ್ಳಿಯೊಂದರಿಂದ ಜನವರಿ 10ರಂದು ಕಣ್ಮರೆಯಾಗಿದ್ದಳು. ಇದಾಗಿ ಒಂದು ವಾರದ ಬಳಿಕ ಮಗುವಿನ ಮೃತದೇಹ ಅದೇ ಪ್ರದೇಶದಲ್ಲಿ ಪತ್ತೆಯಾಗಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com