ಮೋದಿ-ಕ್ಸಿ ಜಿನ್ ಪಿಂಗ್ ಭೇಟಿ ಬೆನ್ನಲ್ಲೇ, ಇಂಡೋ-ಟಿಬೆಟ್ ಗಡಿಯಲ್ಲಿ 96 ಹೊಸ ಸೇನಾಚೌಕಿಗಳ ನಿರ್ಮಾಣ!

ಚೀನಾದಲ್ಲಿ ಪ್ರಧಾನಿ ಮೋದಿ- ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಭೇಟಿ ಬೆನ್ನಲ್ಲೇ ಇತ್ತ ಭಾರತ ಸರ್ಕಾರ ಇಂಡೋ-ಟಿಬೆಟ್ ಗಡಿಯಲ್ಲಿ ಹೆಚ್ಚುವರಿ ಸೇನಾ ಚೌಕಿಗಳನ್ನು ನಿರ್ಮಾಣ ಮಾಡುವ ರಕ್ಷಣಾ ಸಚಿವಾಲದ ಪ್ರಸ್ತಾಪಕ್ಕೆ ಅನುಮೋದನೆ ನೀಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ಚೀನಾದಲ್ಲಿ ಪ್ರಧಾನಿ ಮೋದಿ- ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಭೇಟಿ ಬೆನ್ನಲ್ಲೇ ಇತ್ತ ಭಾರತ ಸರ್ಕಾರ ಇಂಡೋ-ಟಿಬೆಟ್ ಗಡಿಯಲ್ಲಿ ಹೆಚ್ಚುವರಿ ಸೇನಾ ಚೌಕಿಗಳನ್ನು ನಿರ್ಮಾಣ ಮಾಡುವ ರಕ್ಷಣಾ ಸಚಿವಾಲದ ಪ್ರಸ್ತಾಪಕ್ಕೆ ಅನುಮೋದನೆ ನೀಡಿದೆ.
ಚೀನಾದೊಂದಿಗೆ ಸ್ನೇಹವೃದ್ಧಿಯ ಜೊತೆಗೆ ಗಡಿ ರಕ್ಷಣೆಗೂ ಮಹತ್ವ ನೀಡಿರುವ ಭಾರತ, ಚೀನಾ-ಭಾರತ ಗಡಿಯಲ್ಲಿ ಹೊಸದಾಗಿ 96 ಸೇನಾ ಚೌಕಿ ನಿರ್ಮಾಣ ಮಾಡಲು ಮುಂದಾಗಿದೆ. ಈ ಬಗ್ಗೆ ಕೇಂದ್ರ ಗೃಹ ಸಚಿವಾಲಯ ನೂತನ ಪ್ರಸ್ತಾಪವೊಂದಕ್ಕೆ ಅನುಮೋದನೆ ನೀಡಿದ್ದು, ಅದರಂತೆ ಇಂಡೋ-ಟಿಬೆಟ್ ಗಡಿಯಲ್ಲಿ ಹೊಸದಾಗಿ 92 ಗಡಿಚೌಕಿಗಳನ್ನು ನಿರ್ಮಾಣ ಮಾಡಲು ಮುಂದಾಗಿದೆ.

ಅದರಂತೆ ಎರಡೂ ದೇಶಗಳ ನಡುವಿನ 3,488 ಕಿ.ಮೀ ಉದ್ದಕ್ಕೂ ಇನ್ನಷ್ಟು ಇಂಡೋ ಟಿಬೆಟ್ ಗಡಿ ಠಾಣೆಗಳನ್ನು ನಿರ್ಮಿಸಲು ರಕ್ಷಣಾ ಸಚಿವಾಲಯದೊಂದಿಗೆ ಚರ್ಚೆ ನಡೆಸಿದೆ ಎನ್ನಲಾಗಿದೆ. ಹೊಸದಾಗಿ 96 ಗಡಿ ಠಾಣೆಗಳ ನಿರ್ಮಾಣದೊಂದಿಗೆ ಈ ಗಡಿಯಲ್ಲಿ ಒಟ್ಟು ಗಡಿಠಾಣೆಗಳ ಸಂಖ್ಯೆ 272 ಕ್ಕೆ ಏರುತ್ತದೆ. ಹಿಮಾಚಲ ಪ್ರದೇಶ, ಉತ್ತರಾಖಂಡ ಮತ್ತು ಅರುಣಾಚಲಪ್ರದೇಶಗಳಲ್ಲಿ ಈ ಹೊಸ ಗಡಿಠಾಣಾ ಚೌಕಿಗಳು ತಲೆ ಎತ್ತಲಿವೆ.
ಗಡಿ ಠಾಣೆಗಳ ಹೆಚ್ಚು ಹೆಚ್ಚು ಇದ್ದಷ್ಟು ಗಡಿಯಲ್ಲಿಯ ಸೇನಾ ತುಕಡಿಗಳ ನಡುವಿನ ಸಂಪರ್ಕ ಬಲಗೊಳ್ಳುತ್ತದೆ. ಗಡಿ ಠಾಣೆಗಳು ಹತ್ತಿರ ಹತ್ತಿರ ಇದ್ದಾಗ ಅಗತ್ಯ ಸಂದರ್ಭಗಳಲ್ಲಿ ಯೋಧರಿಗೆ ಶಸ್ತ್ರಾಸ್ತ್ರಗಳ ಪೂರೈಕೆ ಸೇರಿದಂತೆ ಅಗತ್ಯ ವಸ್ತುಗಳನ್ನು ಬೇಗನೆ ತಲುಪಿಸಲು ಸಾಧ್ಯವಾಗುತ್ತದೆ. 
ಚೀನಾ-ಭಾರತ ಗಡಿಯಲ್ಲಿಯ ಕೆಲವು ಗಡಿ ಠಾಣೆಗಳು ಸಮಾನ ಮಟ್ಟಕ್ಕಿಂತ 12,000ದಿಂದ 18,000 ಅಡಿಗಳಷ್ಟು ಎತ್ತರದಲ್ಲಿದ್ದು, ತುರ್ತು ಸಂದರ್ಭಗಳಲ್ಲಿ ಇಲ್ಲಿಗೆ ಅಗತ್ಯ ವಸ್ತುಗಳನ್ನು ತಲುಪಿಸುವುದು ಕಷ್ಟಕರ. ಈ ಹಿನ್ನೆಲೆಯಲ್ಲಿಯೇ ಈಗ ಗಡಿ ಠಾಣೆಗಳ ಹೆಚ್ಚಳಕ್ಕೆ ಭಾರತ ಸರ್ಕಾರ ಮುಂದಾಗಿದೆ ಎನ್ನಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com