ಅಮಿತ್ ಶಾ ರ್ಯಾಲಿಗೆ ಈಗಾಗಲೇ ಅನುಮತಿ ನೀಡಿದ್ದೇವೆ: ಕೋಲ್ಕತ್ತಾ ಪೋಲೀಸ್

ಆಗಸ್ಟ್ 11ರಂದು ಕೋಲ್ಕತ್ತಾದಲ್ಲಿ ನಡೆಯಲಿರುವ ಅಮಿತ್ ಶಾ ಅವರ ರ್ಯಾಲಿಗೆ ಉದಾಗಲೇ ಅನುಮತಿ ನೀಡಲಾಗಿದೆ ಎಂದು ಕೋಲ್ಕತ್ತಾ ಪೋಲೀಸರು ಹೇಳಿದ್ದಾರೆ.
ಅಮಿತ್ ಶಾ
ಅಮಿತ್ ಶಾ
Updated on: 
ಕೋಲ್ಕತ್ತಾ: ಆಗಸ್ಟ್ 11ರಂದು ಕೋಲ್ಕತ್ತಾದಲ್ಲಿ ನಡೆಯಲಿರುವ ಅಮಿತ್ ಶಾ ಅವರ ರ್ಯಾಲಿಗೆ ಉದಾಗಲೇ ಅನುಮತಿ ನೀಡಲಾಗಿದೆ ಎಂದು ಕೋಲ್ಕತ್ತಾ ಪೋಲೀಸರು ಹೇಳಿದ್ದಾರೆ. ಅಮಿತ್ ಶಾ ರ್ಯಾಲಿಗೆ ಕೋಲ್ಕತ್ತಾ ಪೋಲೀಸರಿಂದ ಅನುಮತಿ ನಿರಾಕರಣೆ ಎನ್ನುವ ಸುಳ್ಳು ವದಂತಿಗಳು ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿರುವ ಹಿನ್ನೆಲೆಯಲ್ಲಿ ಕೋಲ್ಕತ್ತಾ ಪೋಲೀಸರು ಈ ಸ್ಪಷ್ಟನೆ ನಿಡಿದ್ದಾರೆ.
ಬಿಜೆಪಿ ರ್ಯಾಲಿಗಾಗಿ ತಾನು ಆಗಸ್ಟ್ 11 ರಂದು ಕೋಲ್ಕತ್ತಾಗೆ ತೆರಳಲಿದ್ದೇನೆ ಎಂದು ಅಮಿತ್ ಶಾ ಹೇಳಿದ್ದಾರೆ. ಇತ್ತ ಕೋಲ್ಕತ್ತಾ ರ್ಯಾಲಿಗೆ ಅನುಮತಿ ನೀಡಿದ ಕುರಿತು ಪೋಲೀಸ್ ಇಲಾಖೆಯಿಂದ ನಮಗೆ ಇದುವರೆಗೆ ಯಾವ ಅಧಿಕೃತ ಮಾಹಿತ್ತಿ ಬಂದಿಲ್ಲ ಎಂದು ಬಿಜೆಪಿ ಯುವ ಮೋರ್ಛಾ ಹೇಳಿದೆ.
ಪೋಲೀಸರು ತನ್ನನ್ನು ಬಂಧಿಸಿದರೂ ಸರಿಯೇ ನಾನು ಕೋಲ್ಕತ್ತಾಗೆ ತೆರಳುವುದು ಶತ ಸಿದ್ದ ಎಂದು ಶಾ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com