ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಎತ್ತುಗಳ ಜತೆ ಯುವ ರೈತರ ಕಿಕಿ ಡ್ಯಾನ್ಸ್, ಯೂಟ್ಯೂಬ್‌ನಲ್ಲಿ ಸಖತ್ ಸದ್ದು!

ವಿಶ್ವದಾದ್ಯಂತ ಸದ್ಯ ಕಿಕಿ ಡ್ಯಾನ್ಸ್ ಎಂಬ ಅಪಾಯಕಾರಿ ಚಾಲೆಂಜ್ ಒಂದು ಟ್ರೆಂಡ್ ಆಗಿದೆ. ಸದ್ಯ ಎಲ್ಲಿ ನೋಡಿದರು ಕಿಕಿ ಡ್ಯಾನ್ಸ್ ನದ್ದೆ ಹವಾ. ಕಾರಿನ ಜೊತೆ ಕಿಕಿ ಡ್ಯಾನ್ಸ್...
ಹೈದರಾಬಾದ್: ವಿಶ್ವದಾದ್ಯಂತ ಸದ್ಯ ಕಿಕಿ ಡ್ಯಾನ್ಸ್ ಎಂಬ ಅಪಾಯಕಾರಿ ಚಾಲೆಂಜ್ ಒಂದು ಟ್ರೆಂಡ್ ಆಗಿದೆ. ಸದ್ಯ ಎಲ್ಲಿ ನೋಡಿದರು ಕಿಕಿ ಡ್ಯಾನ್ಸ್ ನದ್ದೆ ಹವಾ. ಕಾರಿನ ಜೊತೆ ಕಿಕಿ ಡ್ಯಾನ್ಸ್ ಮಾಡಿದರೆ, ತೆಲಂಗಾಣದಲ್ಲಿ ಯುವ ರೈತರಿಬ್ಬರು ಎತ್ತುಗಳ ಜೊತೆ ಕಿಕಿ ಡ್ಯಾನ್ಸ್ ಮಾಡಿ ಸುದ್ದಿಯಾಗಿದ್ದಾರೆ. 
ಅಪಾಯಕಾರಿ ಕಿಕಿ ಡ್ಯಾನ್ಸ್ ಕುರಿತಂತೆ ಜಾಗೃತಿ ಮೂಡಿಸುವ ಉದ್ದೇಶದಿಂದ ಮೂವರು ರೈತರು ಎತ್ತುಗಳ ಜತೆ ಕಿಕಿ ಡ್ಯಾನ್ಸ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡಿದ್ದಾರೆ. 
ತೆಲಂಗಾಣದ ಕರಿಂನಗರ ಜಿಲ್ಲೆಯ ಲಂಬಾಡಿಪಲ್ಲಿ ಗ್ರಾಮದ ರೈತರಾದ ಅನಿಲ್ ಗೀಲಾ ಮತ್ತು ಪಿಲ್ಲಿ ತಿರುಪತಿ ಇಬ್ಬರು ಎತ್ತುಗಳ ಜತೆ ಡ್ಯಾನ್ಸ್ ಮಾಡಿದ್ದು ಶ್ರೀರಾಮ್ ಶ್ರೀಕಾಂತ್ ವಿಡಿಯೋ ಮಾಡಿದ್ದಾರೆ. 
ಇದು ಸಾಮಾನ್ಯ ಡ್ಯಾನ್ಸ್ ಆಗಿದ್ದು ನಾವು ಜಮೀನಿನಲ್ಲಿ ಹಲವು ಬಾರಿ ತಯಾರಿ ನಡೆಸಿ ನಂತರ ಮೊಬೈಲ್ ನಲ್ಲಿ ಚಿತ್ರೀಕರಣ ಮಾಡಿದ್ದೇವು. ಸಮತಟ್ಟಾದ ರಸ್ತೆಯಲ್ಲಿ ಡ್ಯಾನ್ಸ್ ಮಾಡುವುದು ಸುಲಭ. ಆದರೆ ಗದ್ದೆಯಲ್ಲಿ ಎತ್ತುಗಳ ಜತೆ ಡ್ಯಾನ್ಸ್ ಮಾಡುವುದು ಕಷ್ಟ ಎಂದು ಹೇಳಿದ್ದಾರೆ. 

Related Stories

No stories found.

Advertisement

X
Kannada Prabha
www.kannadaprabha.com