ನವದೆಹಲಿ: ರಾಜ್ಯಸಭೆಯ ಉಪ ಸಭಾಪತಿ ಸ್ಥಾನಕ್ಕೆ ನಡೆಯಲಿರುವ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಬಿ.ಕೆ. ಹರಿಪ್ರಸಾದ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಬುಧವಾರ ತಿಳಿದುಬಂದಿದೆ.
ರಾಜ್ಯಸಭಾ ಉಪ ಸಭಾಪತಿ ಸ್ಥಾನಕ್ಕೆ ಸಂಸತ್ತಿನಲ್ಲಿ ನಡೆಯುತ್ತಿರುವ ಮುಂಗಾರು ಅಧಿವೇಶನ ಕೊನೆಯ ಎರಡನೇ ದಿನದಂದು ಅಂದರೆ ಆಗಸ್ಟ್ 9 ರಂದು ಚುನಾವಣೆ ನಡೆಯಲಿದೆ.
ಉಪ ಸಭಾಪತಿ ಸ್ಥಾನ ಚುನಾವಣೆಗೆ ಪ್ರತಿಪಕ್ಷಗಳ ಅಭ್ಯರ್ಥಿಯಾಗಿ ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್'ಸಿಪಿ)ಯ ವಂದನಾ ಚವಾಣ್ ಅವರನ್ನು ನಿನ್ನೆಯಷ್ಟೇ ಆಯ್ಕೆ ಮಾಡಲಾಗಿತ್ತು.
ವಂದನಾ ಅವರನ್ನು ಗೆಲ್ಲಿಸುವುದಕ್ಕಾಗಿ ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್, ಬಿಜೆಡಿಯ ನವೀನ್ ಪಟ್ನಾಯಕ್ ಮತ್ತು ಶಿವಸೇನೆ ಬೆಂಬಲ ಪಡೆಯಲು ಮುಂದಾಗಿದ್ದಾರೆ.
ಮುಂಬೈ ಉಗ್ರ ದಾಳಿಯಲ್ಲಿ ಮಡಿದ ಅಶೋಕ್ ಕಾಮ್ಟೆ ಪತ್ನಿ ವಿನಿತಾ ಕಾಮ್ಟೆಯವರ ಸಹೋದರಿ ವಂದನಾ ಕಾಮ್ಟೆ, ಮತ್ತೊಂದೆಡೆ ಎನ್'ಡಿಎ ಮೈತ್ರಿಕೂಟದಲ್ಲಿ ಜೆಡಿಯು ಸಂಸದ ಹರಿವಂಶ ನಾರಾಯಣ್ ಸಿಂಗ್ ರನ್ನು ಕಣಕ್ಕಿಳಿಸಲು ನಿರ್ಧರಿಸಲಾಗಿದೆ.