ಇನ್ನು ಕೇರಳದಲ್ಲಿ ಮಳೆಯಿಂದಾಗಿ ಸಾವನ್ನಪ್ಪಿದವರ ಸಂಖ್ಯೆ 67ಕ್ಕೇ ಏರಿಕೆಯಾಗಿದ್ದು, ಕಂಜೂರಿನಲ್ಲಿ ನಿನ್ನೆ ಐದು ಮಂದಿ ಹಾಗೂ ಇಂದು ಒಂದೇ ದಿನ 25 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಇನ್ನು ರೆಡ್ ಅಲರ್ಟ್ ಘೋಷಣೆಯಾಗಿರುವ ಎಲ್ಲ 12 ಜಿಲ್ಲೆಗಳಲ್ಲೂ ಪ್ರವಾಹ ಪರಿಸ್ಥಿತಿ ಮುಂದುವರೆದಿದ್ದು, ರಸ್ತೆ, ರೈಲು ಸಂಚಾರ ಸ್ಥಗಿತವಾಗಿದೆ. ಭಾರತೀಯ ಸೇನೆ ಮತ್ತು ಎನ್ ಡಿಆರ್ ಎಫ್ ತಂಡಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿವೆ.