ಮೂವರು ಮಕ್ಕಳ ತಾಯಿಯಾಗಿರುವ ಶಾಝಿಯಾ, ಪತಿ ಅಬ್ಬಾಸ್ ಗೆ ತಲಾಖ್ ನೀಡಿದ್ದು, ತನ್ನ ಸೋದರ ಸಂಬಂಧಿಯೂ ಆಗಿರುವ ಪ್ರಿಒಯಕರನ ಜೊತೆಗೆ ಪರಾರಿಯಾಗಿದ್ದಾಳೆ. ತ್ರಿವಳಿ ತಲಾಖ್ ಗೆ ಸಂಬಂಧಿಸಿದಂತೆ ಕಳೆದ ವರ್ಷ ಮಹತ್ವದ ತೀರ್ಪು ನೀಡಿದ್ದ ಸುಪ್ರೀಂ ಕೋರ್ಟ್, ತ್ರಿವಳಿ ತಲಾಖ್ ಕಾನೂನು ಬಾಹೀರ ಎಂದು ಹೇಳಿತ್ತು. ತ್ರಿವಳಿ ತಲಾಖ್ ನ್ನು ಅಪರಾಧ ಎಂದು ಪರಿಗಣಿಸುವ ಮಸೂದೆಯನ್ನು ಕೇಂದ್ರ ಸರ್ಕಾರ ಲೋಕಸಭೆಯಲ್ಲಿ ಅಂಗೀಕರಿಸಲಾಗಿದ್ದು ರಾಜ್ಯಸಭೆಯಲ್ಲಿ ಇನ್ನಷ್ಟೇ ಅಂಗೀಕಾರವಾಗಬೇಕಿದೆ.