ಕದ್ದ ಪರ್ಸ್ ಹಿಂತಿರುಗಿಸಿದ ಕಳ್ಳ! ಮುಂಬೈ ಪೋಲೀಸರ ಫನ್ನಿ ಟ್ವೀಟ್ ಗೆ ನೆಟ್ಟಿಗರಿಂದ ಭಾರೀ ಸ್ಪಂದನೆ

ಮುಂಬೈ ಪೋಲೀಸರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಆಗಾಗ ಉತ್ತಮ ವಿಡಿಯೋ, ಮೀಮ್ಸ್ ಮೂಲಕ ನಾಗರಿಕರಿಗೆ ಜಾಗೃತಿ ಸಂದೇಶ ರವಾನಿಸುತ್ತಿರುವುದು.....
ಮುಂಬೈ ಪೋಲೀಸರ ಫನ್ನಿ ಟ್ವೀಟ್ ವೀಡಿಯೋ ದೃಶ್ಯ
ಮುಂಬೈ ಪೋಲೀಸರ ಫನ್ನಿ ಟ್ವೀಟ್ ವೀಡಿಯೋ ದೃಶ್ಯ
ಮುಂಬೈ: ಮುಂಬೈ ಪೋಲೀಸರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಆಗಾಗ ಉತ್ತಮ ವಿಡಿಯೋ, ಮೀಮ್ಸ್ ಮೂಲಕ ನಾಗರಿಕರಿಗೆ ಜಾಗೃತಿ ಸಂದೇಶ ರವಾನಿಸುತ್ತಿರುವುದು ಸೋಷಿಯಲ್ ಮಿಡಿಯಾಗಳಲ್ಲಿ ಸದ್ದು ಮಾಡುತ್ತಲಿರುತ್ತದೆ. ಈ ಬಾರಿ ಸಹ ಅವರು ಮತ್ತೆ ಉತ್ತಮ ಮೀಮ್ಸ್, ಸೃಜನಶೀಲ ವೀಡಿಯೋ, ಚಿತ್ರಗಳೊಂದಿಗೆ ಟ್ವೀಟ್ ಮಾಡಿದ್ದು ನೆಟ್ಟಿಗರಿಂದ ಸಾಕಷ್ತು ಮೆಚ್ಚುಗೆ ಗಳಿಸಿದೆ.
ಈ ಬಾರಿ ಮುಂಬೈ ಪೋಲೀಸರು ಪಿಕ್ ಪಾಕೆಟ್ ಗೆ ಸಂಬಂಧಿಸಿದ ವೀಡಿಯೋ ಒಂದನ್ನು ತಮ್ಮ ಟ್ವಿಟ್ಟರ್ ನಲ್ಲಿ ಹಾಕಿಕೊ<ಡಿದ್ದು ಇದು ಕೇವಲ ಫನ್ನಿ ವೀಡಿಯೋವಾಗಿದ್ದರೂ ಸಹ ವಾಸ್ತವ ಪರಿಣಾಮ ಮಾತ್ರ ತುಂಬಾ ಗಂಭೀರವಾಗಿದೆ.
#EyeOpenersForYou ಎನ್ನುವ ಟ್ಯಾಗ್ ನೊಂದಿಗೆ 22-ಸೆಕೆಂಡುಗಳ ಈ ವಿಡಿಯೋ ಕ್ಲಿಪ್ ಇದೆ. ಇದರಲ್ಲಿ ಓರ್ವ ಪಿಕ್ ಪಾಕೆಟರ್ ವ್ಯಕ್ತಿಯೊಬ್ಬರ ಪರ್ಸ್ ಕದಿಯಲು ಬಯಸುತ್ತಾನೆ.ಸರತಿ ಸಾಲಿನಲ್ಲಿ ತನ್ನ ಮುಂದೆ ನಿಂತ ವ್ಯಕ್ತಿಯ ಪರ್ಸ್ ಕದಿಯುತ್ತಾನೆ ಆದರೆ ಅದೇ ವೇಳೆ ಕಳ್ಳನು ತಾನು ಸಿಸಿಟಿವಿ ಕ್ಯಾಮರಾದ ಕಣ್ಗಾವಲಿನಲ್ಲಿದ್ದೇನೆ ಎನ್ನುವ್ಬುದನ್ನು ಗಮನಿಸಿ ಕಳವು ಮಾಡಿದ್ದ ಪರ್ಸ್ ಮರಳಿಸಲು ಮುಂದಾಗುತ್ತಾನೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X

Advertisement

X
Kannada Prabha
www.kannadaprabha.com