ಯಾರೂ ನನಗೆ ಗೌರವ ಕೊಡುತ್ತಿಲ್ಲ, ಸತ್ತ ಮೇಲೆ ಕೊಡಬಹುದು: ಮುಲಾಯಂ

ಯಾರೂ ನನಗೆ ಗೌರವ ಕೊಡುತ್ತಿಲ್ಲ. ಬಹುಶಃ ನಾನು ಸತ್ತ ಮೇಲೆ ಜನ ಗೌರವ ಕೊಡಬಹುದು ಎಂದು ಸಮಾಜವಾದಿ ಪಕ್ಷದ ವರಿಷ್ಠ ಮುಲಾಯಂ ಸಿಂಗ್ ಯಾದವ್ ಹೇಳಿದ್ದಾರೆ...
ಮುಲಾಯಂ ಸಿಂಗ್ ಯಾದವ್
ಮುಲಾಯಂ ಸಿಂಗ್ ಯಾದವ್
Updated on: 
ಲಖನೌ: ಯಾರೂ ನನಗೆ ಗೌರವ ಕೊಡುತ್ತಿಲ್ಲ. ಬಹುಶಃ ನಾನು ಸತ್ತ ಮೇಲೆ ಜನ ಗೌರವ ಕೊಡಬಹುದು ಎಂದು ಸಮಾಜವಾದಿ ಪಕ್ಷದ ವರಿಷ್ಠ ಮುಲಾಯಂ ಸಿಂಗ್ ಯಾದವ್ ಹೇಳಿದ್ದಾರೆ. 
ಬದುಕಿರುವಾಗ ಬಿಟ್ಟು ಸತ್ತ ಮೇಲೆ ಗೌರವ ನೀಡುವುದು ದೇಶದ ಜನರ ಸಂಪ್ರದಾಯವಾಗಿದೆ. ಈ ದೇಶದಲ್ಲಿ ಬದುಕಿರುವವರಿಗೆ ಜನತೆ ಗೌರವ ನೀಡುವುದಿಲ್ಲ ಎಂದು ಲೋಹಿಯಾ ಜೀ ಸಹ ಹೇಳುತ್ತಿದ್ದರು ಎಂದು ಮುಲಾಯಂ ಸಿಂಗ್ ಹೇಳಿದ್ದಾರೆ. 
ಸಮಾಜವಾದಿ ಪಕ್ಷದ ಮುಖಂಡ ಭಗವತಿ ಸಿಂಗ್ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪಕ್ಷದ ಹಿರಿಯ ನಾಯಕ ಭಗವತಿ ಸಿಂಗ್ ತನಗೆ ಸಮಾಜವಾದ ಹಾಗೂ ಪಕ್ಷವನ್ನು ಬಲಪಡಿಸಲು ನೆರವಾಗಿದ್ದರು ಎಂದರು. 
ಇನ್ನು ಪಕ್ಷದ ಇಂದಿನ ಯುವಕರು ಹಿರಿಯ ನಾಯಕರಿಂದ ಸರಳತೆ ಹಾಗೂ ಮೌಲ್ಯಗಳೊಂದಿಗೆ ಪಕ್ಷವನ್ನು ಮುನ್ನಡೆಸಬೇಕಾಗಿದೆ. ಇದು ನಮ್ಮ ಪಕ್ಷಕ್ಕೆ ಮುಖ್ಯವಾಗಿದೆ ಎಂದು ಮುಲಾಯಂ ಸಿಂಗ್ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com