ಲಖನೌ

ಅಂದು ಜನರು ನನ್ನ ಮಾತು ಕೇಳಿದ್ದಕ್ಕೆ ಇಂದು ಚಿನ್ನದ ಬೆಲೆ ಇಳಿಕೆಯಾಗಿದೆ: ಪ್ರಧಾನಿ ನರೇಂದ್ರ ಮೋದಿ
ಕಳೆದ ಕೆಲವು ತಿಂಗಳುಗಳಲ್ಲಿ ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆ ಕಂಡುಬಂದಿದೆ. ಪ್ರಧಾನಿ ಮನವಿಗೆ ಒಂದು ದಿನ ಮೊದಲು, ಅಂದರೆ ಮೇ 9 ರಂದು 24 ಕ್ಯಾರೆಟ್ನ ಒಂದು ಗ್ರಾಂಗೆ ₹15,250 ಇದ್ದ ಚಿನ್ನದ ಬೆಲೆ, ಇಂದು ಪ್ರತಿ ಗ್ರಾಂಗೆ ₹12,523ಗೆ ಇಳಿದಿದೆ.

ಅಕ್ರಮ ಹಣ ವರ್ಗಾವಣೆ ಪ್ರಕರಣ: ಬಿಡುಗಡೆ ಬೆನ್ನಲ್ಲೇ ಮತ್ತೆ Azam Khan ಜೈಲುಪಾಲು!
ದ್ವಿ ಪ್ಯಾನ್ ಕಾರ್ಡ್ ಪ್ರಕರಣದಲ್ಲಿ ಅಲಹಾಬಾದ್ ಹೈಕೋರ್ಟ್ ಶಿಕ್ಷೆಯನ್ನು ಅಮಾನತುಗೊಳಿಸಿ ಜಾಮೀನು ನೀಡಿದ್ದರಿಂದ ಅಜಂ ಖಾನ್ ಬುಧವಾರ ಜೈಲಿನಿಂದ ಬಿಡುಗಡೆಯಾಗಿದ್ದರು.

ಲಖನೌ: ಕಾರ್ ಪಾರ್ಕಿಂಗ್ ವಿಚಾರಕ್ಕೆ ಜಗಳ; ಮನಬಂದಂತೆ ಗುಂಡಿನ ದಾಳಿ, ಮೂವರ ಭೀಕರ ಹತ್ಯೆ!
ಲಖನೌನ ಸಾದತ್ಗಂಜ್ ಪ್ರದೇಶದಲ್ಲಿ ಕಾರು ನಿಲ್ಲಿಸುವ ವಿಚಾರಕ್ಕೆ ಜಗಳ ಆರಂಭವಾಗಿದ್ದು, ಈ ವೇಳೆ, ವ್ಯಕ್ತಿಯೊಬ್ಬ ಮನಬಂದಂತೆ ಗುಂಡು ಹಾರಿಸಿದ್ದರಿಂದ ಮೂವರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮುಳುವಾಯ್ತಾ ಓಲೈಕೆ ರಾಜಕಾರಣ?; ಯಾದವರು 7%, ಮುಸ್ಲಿಮರು 22%, ನಮ್ಮಲ್ಲೇ CM ಅಭ್ಯರ್ಥಿ ಮಾಡಿ; ಅಖಿಲೇಶ್ ಯಾದವ್`ಗೆ ಮೌಲಾನಾ ಗಡುವು!
ಉತ್ತರ ಪ್ರದೇಶದಲ್ಲಿ ಮುಸ್ಲಿಂ ಸಮುದಾಯಕ್ಕೆ ಪಕ್ಷದಲ್ಲಿ ಸೂಕ್ತ ರಾಜಕೀಯ ಪ್ರಾತಿನಿಧ್ಯ ಸಿಗುತ್ತಿಲ್ಲ ಎಂದು ಪ್ರಶ್ನಿಸಿರುವ ಅವರು, 2027ರ ಚುನಾವಣೆಗೆ ಮುಸ್ಲಿಂ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸಬೇಕು ಎಂದು ಆಗ್ರಹಿಸಿದ್ದಾರೆ.

ನಡು ರಸ್ತೆಯಲ್ಲಿ ಪತ್ನಿಗೆ ಗುಂಡು, ಮನೆಗೆ ಬಂದು ಸಹೋದರಿ ಕೊಲೆ, ಆತ್ಮಹತ್ಯೆ; ಹನುಮಾನ್ ಚಾಲೀಸಾ, ವಾಟ್ಸ್ ಆಪ್ ಸ್ಟೇಟಸ್!
ವ್ಯಕ್ತಿಯೋರ್ವ ಐಸಿಐಸಿಐ ಬ್ಯಾಂಕ್ ಹೊರಗೆ ಪತ್ನಿಗೆ ಗುಂಡು ಹಾರಿಸಿ, ಸಹೋದರಿಯನ್ನು ಕೊಂದು ನಂತರ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗುರುವಾರ ಲಖನೌ ನಲ್ಲಿ ನಡೆದಿದೆ.

ಶಾಲೆಗಳಿಗೆ ಯೂಟ್ಯೂಬರ್ಗಳು, ಸೋಷಿಯಲ್ ಮೀಡಿಯಾ ಮಂದಿಗೆ ನೋ ಎಂಟ್ರಿ: ಉತ್ತರ ಪ್ರದೇಶ ಸರ್ಕಾರ ಆದೇಶ
ಉತ್ತರ ಪ್ರದೇಶದ ಬಲಿಯಾ ಜಿಲ್ಲೆಯ ಸರ್ಕಾರಿ ಹಾಗೂ ಅನುದಾನಿತ ಪ್ರಾಥಮಿಕ ಶಿಕ್ಷಣ ಶಾಲೆಗಳಿಗೆ ಹೊರಗಿನವರು, ಯೂಟ್ಯೂಬರ್ಗಳು ಮತ್ತು ‘ಸೋಷಿಯಲ್ ಮೀಡಿಯಾ ಚಾನೆಲ್ಗಳಿಗೆ ಸಂಬಂಧಿಸಿದ ವ್ಯಕ್ತಿಗಳ’ ಅನಧಿಕೃತ ಪ್ರವೇಶ..

ಯುಪಿ ರಾಜ್ಯಪಾಲರ ನಿರ್ದೇಶನ: KGMU ಹಾಸ್ಟೆಲ್ಗಳಲ್ಲಿ ಮಾಂಸಾಹಾರ ತಯಾರಿಕೆಗೆ ನಿಷೇಧ!
KGMU ಹಾಸ್ಟೆಲ್ಗಳಲ್ಲಿ ಮಾಂಸಾಹಾರಿ ಊಟ ತಯಾರಿಕೆ ಬಗ್ಗೆ ಉತ್ತರ ಪ್ರದೇಶ ರಾಜ್ಯಪಾಲೆ ಆನಂದಿಬೆನ್ ಪಟೇಲ್ ಕಳವಳ ವ್ಯಕ್ತಪಡಿಸಿದ ನಂತರ ಈ ಕ್ರಮ ಕೈಗೊಳ್ಳಲಾಗಿದೆ.

ಉತ್ತರಪ್ರದೇಶ: ಲಖನೌ ಕೋಚಿಂಗ್ ಸೆಂಟರ್ ಅಗ್ನಿ ಅವಘಡ; ವಿದ್ಯಾರ್ಥಿಗಳ ಸಾವಿನ ಸಂಖ್ಯೆ 15ಕ್ಕೆ ಏರಿಕೆ, 5 ಮಂದಿಗೆ ಗಂಭೀರ ಗಾಯ!
ಲಖನೌದ ಅಲಿಗಂಜ್ ಪೊಲೀಸ್ ಠಾಣೆ ಪ್ರದೇಶದ ಪುರಾಣಿ ಪ್ರದೇಶದ ಕೋಚಿಂಗ್ ಸೆಂಟರ್ ನಲ್ಲಿ ಇಂದು ಭಾರಿ ಬೆಂಕಿ ಕಾಣಿಸಿಕೊಂಡಿದ್ದು 15 ಮಂದಿ ಸಜೀವ ದಹನವಾಗಿದ್ದಾರೆ. ಇನ್ನು ಪ್ರಾಣವನ್ನು ಉಳಿಸಿಕೊಳ್ಳಲು ಹಲವರು ಕಟ್ಟಡದಿಂದ ಜಿಗಿದಿದ್ದಾರೆ.
ಆಹ್ವಾನವಿಲ್ಲದೆ BSP ಮುಖ್ಯಸ್ಥೆ ಮಾಯಾವತಿ ಮನೆಗೆ ಭೇಟಿ ನೀಡಿದ ಕಾಂಗ್ರೆಸ್ ನಾಯಕರು; ಹಿಂದಕ್ಕೆ ಕಳುಹಿಸಿದ ಭದ್ರತಾ ಸಿಬ್ಬಂದಿ!
ಹಿರಿಯ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಸಂದೇಶವನ್ನು ತಿಳಿಸಲು ಮಾಯಾವತಿ ಅವರನ್ನು ಸಂಪರ್ಕಿಸಲು ಮುಂದಾಗಿದ್ದರು ಎಂಬ ವರದಿಗಳನ್ನು ಪುನಿಯಾ ನಿರಾಕರಿಸಿದರು.

