ಜುಲೈ 23ರಂದು ಈ ಪತ್ರವನ್ನು ಬರೆಯಲಾಗಿದ್ದು, ಈ ಪತ್ರ ಇದೀಗ ಸೋರಿಕೆಯಾಗಿದೆ ಎನ್ನಲಾಗುತ್ತಿದೆ. ಪತ್ರದಲ್ಲಿ ಅಧಿಕಾರಿ ಶುಕ್ಲಾ ಅವರು, 2019ರಲ್ಲಿ ನಡೆಯುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪರ ಪ್ರಚಾರ ಮಾಡಲು ತಾನು ಉತ್ಸುಕನಾಗಿದ್ದೇನೆ ಎಂದು ಹೇಳಿದ್ದಾರೆ ಎನ್ನಲಾಗಿದೆ. ರಾಜ್ಯ ಯೋಜನಾ ಆಯೋಗದ ಮುಖ್ಯಸ್ಥ ಹುದ್ದೆಯನ್ನೂ ತನಗೆ ನೀಡಬಹುದು ಅಥವಾ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಮುಖ್ಯಸ್ಥ ಹುದ್ದೆಯನ್ನೂ ನೀಡಬಹುದೆಂದು ಅವರು ಪತ್ರದಲ್ಲಿ ಬರೆದಿದ್ದಾರೆ ಎನ್ನಲಾಗಿದೆ.