ಚೆನ್ನೈ: ಸುದೀರ್ಘ 50 ವರ್ಷಗಳ ನಂತರ ಡಿಎಂಕೆ ಅಧ್ಯಕ್ಷ ಪಟ್ಟಕ್ಕೆ ಇಂದು ಚುನಾವಣೆ ನಡೆಯುತ್ತಿದೆ. 1969 ಜುಲೈ 29ರಲ್ಲಿ ಕರುಣಾನಿಧಿ ಅವರು ಡಿಎಂಕೆ ಪಕ್ಷದ ಅಧ್ಯಕ್ಷ ಪಟ್ಟ ಅಲಂಕರಿಸಿ, ನಿಧನರಾಗುವವರೆಗೂ ಅದೇ ಸ್ಥಾನದಲ್ಲಿ ಇದ್ದರು. ಈಗ ಆ ಸ್ಠಾನಕ್ಕೆ ಕರುಣಾನಿಧಿ ಅವರ ಇಬ್ಬರು ಪುತ್ರರಲ್ಲಿ ಪೈಪೋಟಿ ಎದ್ದಿದೆ.
2014ರಲ್ಲಿ ಆಳಗಿರಿ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗಿತ್ತು. ಆಗಸ್ಟ್ 7 ರಂದು ಕರುಣಾನಿಧಿ ನಿಧನದ ನಂತರ ಅವರ ಕೆ. ಅಳಗಿರಿ ತಮ್ಮನ್ನು ಪಕ್ಷಕ್ಕೆಸೇರಿಸಿಕೊಳ್ಳದಿದ್ದರೆ ಮುಂದಿನ ಪರಿಣಾಮ ಎದುರಿಸಬೇಕಾಗುತ್ತದೆ ಎಂಬ ಎಚ್ಚರಿಕೆ ನೀಡಿದ್ದಾರೆ.
ತಮ್ಮ 14 ವರ್ಷದಲ್ಲೇ ತಂದೆಯ ಪರ ಪ್ರಚಾರ ಕೆಲಸದಲ್ಲಿ ಭಾಗಿಯಾಗುವ ಮೂಲಕ ಸ್ಟಾಲಿನ್ ರಾಜಕೀಯ ಜೀವನ ಪ್ರವೇಶಿಸಿದರು. ತಂದೆಯ ನೆರಳಿನಲ್ಲಿಯೇ ರಾಜಕೀಯ ಆರಂಭಿಸಿದ ಸ್ಟಾಲಿನ್ಗೆ ಡಿಎಂಕೆ ಪಕ್ಷದಲ್ಲಿ ಕರುಣಾನಿಧಿ ಒಂದು ಸ್ಥಾನ ಕಲ್ಪಿಸಿದ್ದರು.
ಇನ್ನೂ ಇತ್ತಿಚೆಗೆ ಆಳಗಿರಿ ತಮ್ಮ ತಂದೆಯ ಸಮಾಧಿಗೆ ತೆರಳಿ , ತಮ್ಮ ತಂದೆಯ ಸಂಬಂಧಿಕರೆಲ್ಲಾ ತಮ್ಮ ಪರವಾಗಿ ಇದ್ದಾರೆಂದು ಹೇಳಿಕೆ ಕೊಂಡಿದ್ದರು, ಇಂದು ಚುನಾವಣೆ ನಡೆಯಲಿದ್ದು ಡಿಎಂಕೆ ಪಟ್ಟ ಯಾರಿಗೆ ಒಲಿಯಲಿದೆ ಎಂಬದು ತಿಳಿಯುತ್ತದೆ.