ಭಾರತಕ್ಕೆ ಬಂದರೆ ನನ್ನನ್ನು ಹೊಡೆದು ಸಾಯಿಸುತ್ತಾರೆ: ನೀರವ್ ಮೋದಿ ವಾದ

ಭಾರತಕ್ಕೆ ಹಿಂತಿರುಗಿದರೆ ನನ್ನನ್ನು ಹೊಡೆದು ಹತ್ಯೆ ಮಾಡುವ ಸಾಧ್ಯತೆಗಳಿರುವ ಕಾರಣ, ತಾವಿ ವಿಚಾರಣೆಗಾಗಿ ಭಾರತಕ್ಕೆ ಆಗಮಿಸುವುದು ಸಾಧ್ಯವಿಲ್ಲ ಎಂದು ಪಂಜಾಬ್ ನ್ಯಾಷನಲ್ ಬ್ಯಾಂಕ್'ಗೆ ರೂ.14 ಸಾವಿರ ಕೋಟಿ ವಂಚನೆ...
ನೀರವ್ ಮೋದಿ
ನೀರವ್ ಮೋದಿ
Updated on
ಮುಂಬೈ: ಭಾರತಕ್ಕೆ ಹಿಂತಿರುಗಿದರೆ ನನ್ನನ್ನು ಹೊಡೆದು ಹತ್ಯೆ ಮಾಡುವ ಸಾಧ್ಯತೆಗಳಿರುವ ಕಾರಣ, ತಾವಿ ವಿಚಾರಣೆಗಾಗಿ ಭಾರತಕ್ಕೆ ಆಗಮಿಸುವುದು ಸಾಧ್ಯವಿಲ್ಲ ಎಂದು ಪಂಜಾಬ್ ನ್ಯಾಷನಲ್ ಬ್ಯಾಂಕ್'ಗೆ ರೂ.14 ಸಾವಿರ ಕೋಟಿ ವಂಚನೆ ಮಾಡಿದ್ದ ಆರೋಪ ಎದುರಿಸುತ್ತಿರುವ ವಜ್ಯಗಳ ಉದ್ಯಮಿ ನೀರವ್ ಮೋದಿ ನ್ಯಾಯಾಲಯದಲ್ಲಿ ವಾದಿಸಿದ್ದಾರೆ. 
ಭಾರತದಲ್ಲಿ ನನ್ನನ್ನು ಈಗಾಗಲೇ ರಾವಣನ ರೀತಿ ಬಿಂಬಿಸಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ನಾನು ಭಾರತಕ್ಕೆ ಬರಲು ಸಾಧ್ಯವಿಲ್ಲ ಎಂದು ನೀರವ್ ಮೋದಿ ತಮ್ಮ ವಕೀಲರ ಮೂಲಕ ನ್ಯಾಯಾಲಯಕ್ಕೆ ತಿಳಿಸಿದ್ದಾರೆ. 
ನೀರವ್ ಮೋದಿಯವರ ಈ ವಾದವನ್ನು ತಿರಸ್ಕರಿಸಿರುವ ಜಾರಿ ನಿರ್ದೇಶನಾಲಯವು, ನೀರವ್ ಅವರಿದೆ ಭದ್ರತಾ ಬೆದರಿಕೆಗಳಿರುವುದೇ ಆದರೆ, ಪೊಲೀಸರಿಗೆ ದೂರು ನೀಡಬೇಕು ಎಂದು ಹೇಳಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com