ಶುಕ್ರವಾರ ತಾವು ಟ್ವೀಟ್ಟರ್ ನಲ್ಲಿ ಈ ಸಂಬಂಧ ಬರೆದುಕೊಂಡಿರುವ ರಾಹುಲ್ ಗಾಂಧಿ "ಚುನಾವಣೆ ಮುಗಿದ ಬಳಿಕ ಕಾರ್ಯಕರ್ತರು ಇನ್ನಷ್ಟು ಜಾಗೃತರಾಗಿರಬೇಕು. ಮಧ್ಯ ಪ್ರದೇಶದಲ್ಲಿ ಮತದಾನದ ಬಳಿಕ ಇವಿಎಂ ಅಚ್ಚರಿದಾಯಕವಾಗಿ ವರ್ತಿಸಿದೆ. ಕೆಲವರು ಬಸ್ ಕದ್ದು 2 ದಿನಗಳ ಕಾಲ ಕಣ್ಮರೆಯಾಗಿದ್ದರು!ಇನ್ನಿತರರು ಕಣ್ಮರೆಯಾಗಿದ್ದು ಹೋಟೆಲ್ ಗಳಲ್ಲಿ ಕುಡಿಯುತ್ತಾ ಕೂತಿದ್ದರು.ಮೋದಿ ಅವರ ಭಾರತದಲ್ಲಿ ಇವಿಎಂಗಳಿಗೆ ನಿಗೂಢ ಶಕ್ತಿಗಳಿದೆಎಂದು ಅವರು ಹೇಳಿದರು.