'ಬಿಜೆಪಿ' ಸ್ಥಾನ ಏನು ಎಂಬುದನ್ನು ಜನ ಸೆಮಿಫೈನಲ್ ನಲ್ಲಿ ತೋರಿಸಿದ್ದಾರೆ: ಮಮತಾ ಬ್ಯಾನರ್ಜಿ

: 2019ರ ಲೋಕಸಭೆ ಚುನಾವಣೆ ಗೆ ಪಂಚರಾಜ್ಯಗಳ ವಿಧಾನಸಭೆ ಚುನಾವಣಾ ಫಲಿತಾಂಶ ಸೆಮಿ ಫೈನಲ್ ಆಗಿದ್ದು, ಬಿಜೆಪಿ ಎಲ್ಲಿದೆ ಎಂಬದನ್ನು ಜನ ತೋರಿಸಿಕೊಟ್ಟಿದ್ದಾರೆ ....
ಮಮತಾ ಬ್ಯಾನರ್ಜಿ
ಮಮತಾ ಬ್ಯಾನರ್ಜಿ
Updated on: 
ನವದೆಹಲಿ: 2019ರ ಲೋಕಸಭೆ ಚುನಾವಣೆ ಗೆ ಪಂಚರಾಜ್ಯಗಳ  ವಿಧಾನಸಭೆ ಚುನಾವಣಾ ಫಲಿತಾಂಶ ಸೆಮಿ ಫೈನಲ್ ಆಗಿದ್ದು, ಬಿಜೆಪಿ ಎಲ್ಲಿದೆ ಎಂಬದನ್ನು ಜನ ತೋರಿಸಿಕೊಟ್ಟಿದ್ದಾರೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ  ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆಗಳ ಫಲಿತಾಂಶದ ಬಗ್ಗೆ ಪ್ರತಿಕ್ರಿಯಿಸಿದ ಅವರು ಪ್ರಜಾಪ್ರಭುತ್ವದಲ್ಲಿ ಜನರೇ ಮ್ಯಾನ್ ಆಪ್ ದಿ ಮ್ಯಾಚ್ ಎಂದು ವಿವರಿಸಿದ್ದಾರೆ.
ಜನ ಬಿಜೆಪಿ ವಿರುದ್ಧ ಮತ ಚಲಾಯಿಸಿದ್ದಾರೆ,  ಇದು ದೇಶದ ಜನತೆಯ ಆದೇಶ, ಅನ್ಯಾಯದ ವಿರುದ್ಧದ ಗೆಲುವು, ಪ್ರಜಾಪ್ರಭುತ್ವದ ಗೆಲುವು ಎಂದು ಟ್ವೀಟ್ ಮಾಡಿದ್ದಾರೆ.
ದಲಿತರ ಮೇಲೆ ದೌರ್ಜನ್ಯ,  ರೈತರು ಯುವಕರಿಗಾಗಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ ಎಂದು ಮಮತಾ ಸರಣಿ ಟ್ವೀಟ್ ಮಾಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com