ಕಾಶ್ಮೀರದಲ್ಲಿ ಉಗ್ರಗಾಮಿಗಳ ಅಟ್ಟಹಾಸಕ್ಕೆ 3 ಪೋಲೀಸರ ಸಾವು, ಓರ್ವನಿಗೆ ಗಾಯ

ದಕ್ಷಿಣ ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿನ ಜೈನಪೋರಾ ಪ್ರದೇಶದಲ್ಲಿರುವ ಪೋಲೀಸ್ ಚೌಕದ ಮೇಲೆ ದಾಳಿನಡೆಸಿದ ಉಗ್ರಗಾಮಿಗಳು ಮೂವರು .......
ಕಾಶ್ಮೀರದಲ್ಲಿ ಉಗ್ರಗಾಮಿಗಳ ಅಟ್ಟಹಾಸಕ್ಕೆ 3 ಪೋಲೀಸರ ಸಾವು, ಓರ್ವನಿಗೆ ಗಾಯ
ಕಾಶ್ಮೀರದಲ್ಲಿ ಉಗ್ರಗಾಮಿಗಳ ಅಟ್ಟಹಾಸಕ್ಕೆ 3 ಪೋಲೀಸರ ಸಾವು, ಓರ್ವನಿಗೆ ಗಾಯ
Updated on
ಶ್ರೀನಗರ: ದಕ್ಷಿಣ ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿನ ಜೈನಪೋರಾ ಪ್ರದೇಶದಲ್ಲಿರುವ ಪೋಲೀಸ್ ಚೌಕದ ಮೇಲೆ ದಾಳಿನಡೆಸಿದ ಉಗ್ರಗಾಮಿಗಳು ಮೂವರು ಪೋಲೀಸರನ್ನು ಕೊಂದು ಒಬ್ಬರನ್ನು ಗಾಯಗೊಳಿಸಿದ್ದಾರೆ.
ಜೈನಾಪೋರಾ ಪ್ರದೇಶದಲ್ಲಿ ಅಲ್ಪಸಂಖ್ಯಾತರ ಸಮುದಾಯವನ್ನು ರಕ್ಷಿಸುವ ಸಲುವಾಗಿ ಈ ಪೋಲೀಸ್ ಚೌಕಿಯನ್ನು ನಿರ್ಮಾಣ ಮಾಡಲಾಗಿತ್ತು.ಉಗ್ರಗಾಮಿಗಳು ಸ್ಥಳದಲ್ಲಿದ್ದ ಶಸ್ತ್ರಾಸ್ತ್ರಗಲನ್ನು ಸಹ ಹೊತ್ತೊಯ್ದಿದ್ದಾರೆ ಎಂದು ಮೂಲಗಳು ಹೇಳಿದೆ.
ಗುಂಡಿನ ದಾಳಿಯಿಂಅ ಗಾಯಗೊಂಡ ಪೋಲೀಸನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.ಸಧ್ಯ ಆತನ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ. ಉಗ್ರರು ದಾಳಿ ನಡೆಸಿದ ಬಳಿಕ ಪೊಲೀಸರು, ಸಿಆರ್ಪಿಎಫ್ ಮತ್ತು ಸೈನಿಕರು ಸ್ಥಳಕ್ಕೆ ಧಾವಿಸಿದ್ದು ಉಗ್ರಗಾಮಿಗಳ ಶೋಧಕಾರ್ಯದಲ್ಲಿ ತೊಡಗಿದ್ದಾರೆ.
ಜುಲೈ 8, 2016ರಂದು ಹಿಜ್ಬುಲ್ ನಾಯಕ  ಬರ್ಹಾನ್ ವಾನಿ ಎನ್ ಕೌಂಟರ್ ನಡೆದ ಬಳಿಕ  ಶೋಪಿಯಾನ್ ಜಿಲ್ಲೆ ಸೇರಿ ದಕ್ಷಿಣ ಕಾಶ್ಮೀರದ ಮೂರು ಜಿಲ್ಲೆಗಳಲ್ಲಿ ಉಗ್ರಗಾಮಿ ಚಟುವಟಿಕೆಗಳು ತೀವ್ರವಾಗಿದ್ದು ಸದಾ ಕಾಲ ಪ್ರಕ್ಷುಬ್ದ ವಾತಾವರಣದಿಂದ ಕೂಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com