ಗ್ರಾಹಕರಿಗೆ ಎಂಜಲು ಊಟ: ಫುಡ್ ಡೆಲಿವರಿ ಬಾಯ್ ಮೇಲೆ ಮಹೇಶ್ ಬಾಬು ಪತ್ನಿ ಆಕ್ರೋಶ!

ಜೋಮ್ಯಾಟೊ ಫುಡ್ ಡೆಲಿವರಿ ಬಾಯ್ ಆರ್ಡರಿಗೆ ಬಂದಿದ್ದ ಆಹಾರವನ್ನು ರಸ್ತೆ ಬದಿಯಲ್ಲಿ ಕದ್ದು ತಿಂದಿದ್ದ ವಿಡಿಯೋವೊಂದು ವೈರಲ್ ಆಗಿದ್ದು ತೀವ್ರ ಚರ್ಚೆಯಾಗುತ್ತಿದೆ.
ಫುಡ್ ಡೆಲಿವರಿ ಬಾಯ್-ನಮ್ರತಾ-ಮಹೇಶ್
ಫುಡ್ ಡೆಲಿವರಿ ಬಾಯ್-ನಮ್ರತಾ-ಮಹೇಶ್
Updated on
ಜೋಮ್ಯಾಟೊ ಫುಡ್ ಡೆಲಿವರಿ ಬಾಯ್ ಆರ್ಡರಿಗೆ ಬಂದಿದ್ದ ಆಹಾರವನ್ನು ರಸ್ತೆ ಬದಿಯಲ್ಲಿ ಕದ್ದು ತಿಂದಿದ್ದ ವಿಡಿಯೋವೊಂದು ವೈರಲ್ ಆಗಿದ್ದು ತೀವ್ರ ಚರ್ಚೆಯಾಗುತ್ತಿದೆ. ಈ ಬಗ್ಗೆ ಕೆಲವರು ಆತನ ಬಗ್ಗೆ ಅನುಕಂಪ ತೋರಿಸಿದ್ದರೆ ಮತ್ತೆ ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 
ಫುಡ್ ಡೆಲಿವರಿ ಬಾಯ್ ವಿರುದ್ಧ ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಪತ್ನಿ ನಮ್ರತಾ ಶಿರೋಡ್ಕರ್ ಕೂಡಾ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಡೆಲಿವರಿ ಬಾಯ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿ ಕಿಡಿಕಾರಿದ್ದಾರೆ. 
ಪ್ರತಿಷ್ಠಿತ ಫುಡ್ ಡೆಲಿವರಿ ಕಂಪನಿಗಳ ಕಾರ್ಯವೈಖರಿಯನ್ನು ಪ್ರಶ್ನಿಸಿರುವ ನಮ್ರತಾ ಅವರು, ಇಂತಹ ಘಟನೆಗಳು ಜರುಗಲೇಬಾರದು. ಸ್ವಚ್ಛತೆ ಹಾಗೂ ಸೇವೆಯನ್ನು ನಂಬಿ ಗ್ರಾಹಕರು ಆಹಾರವನ್ನು ಆರ್ಡರ್ ಮಾಡುತ್ತಾರೆ. ಆದರೆ ಈ ವ್ಯಕ್ತಿ ಕೆಲಸದ ನೈತಿಕತೆಯನ್ನೇ ಮರೆತಿದ್ದಾನೆ. 
ಇನ್ನೊಮ್ಮೆ ಇಂತಹ ಕಂಪನಿಗಳಲ್ಲಿ ಫುಡ್ ಆರ್ಡರ್ ಮಾಡುವ ಮುನ್ನ ಒಮ್ಮೆ ಯೋಚಿಸಿ. ಈ ರೀತಿ ಆನ್ ಲೈನ್ ಆಹಾರವನ್ನು ಆರ್ಡರ್ ಮಾಡದಿರಲು ನಾನು ಮಕ್ಕಳಿಗೆ ತಿಳಿ ಹೇಳುತ್ತೇನೆ. ನೀವೂ ಕೂಡಾ ಎಚ್ಚರದಿಂದಿರಿ ಎಂದು ಪೋಸ್ಟ್ ಮಾಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com