ಪ್ರಿಯಕರನಿಗೆ ಪೈಲಟ್ ಟ್ರೈನಿಂಗ್ ಕೊಡಿಸಲು ತನ್ನ ಮನೆಗೆ ಕನ್ನ ಹಾಕಿದ ಯುವತಿ, ಆಕೆ ಕದ್ದಿದ್ದು ಎಷ್ಟು ಕೋಟಿ ಗೊತ್ತ?

ತನ್ನ ಪ್ರೇಯಸಿಗೆ ಉಡುಗೊರೆ ಕೊಡುವ ಕಾರಣದಿಂದ ಯುವಕರು ಕಳ್ಳತನ ಮಾಡುವುದು ಸಾಮಾನ್ಯ. ಆದರೆ ಇಲ್ಲೊಬ್ಬ ಯುವತಿ ಪ್ರಿಯಕರನಿಗಾಗಿ ಸ್ವಂತ ಮನೆಯಲ್ಲಿ ಕಳ್ಳತನ ಮಾಡಿ ಸಿಕ್ಕಿಬಿದ್ದಿದ್ದಾಳೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 
ರಾಜ್ಕೋಟ್: ತನ್ನ ಪ್ರೇಯಸಿಗೆ ಉಡುಗೊರೆ ಕೊಡುವ ಕಾರಣದಿಂದ ಯುವಕರು ಕಳ್ಳತನ ಮಾಡುವುದು ಸಾಮಾನ್ಯ. ಆದರೆ ಇಲ್ಲೊಬ್ಬ ಯುವತಿ ಪ್ರಿಯಕರನಿಗಾಗಿ ಸ್ವಂತ ಮನೆಯಲ್ಲಿ ಕಳ್ಳತನ ಮಾಡಿ ಸಿಕ್ಕಿಬಿದ್ದಿದ್ದಾಳೆ. 
20 ವರ್ಷದ ಯುವತಿ ಪ್ರಿಯಾಂಕಾ ಪರ್ಸನ ತನ್ನ ಪ್ರಿಯಕರ 20 ವರ್ಷದ ಹೆತ್ ಶಾಗೆ ಪೈಲೆಟ್ ತರಬೇತಿ ಕೊಡಿಸಲು ತನ್ನ ಮನೆಯಲ್ಲೇ ನಗದು ಮತ್ತು ಚಿನ್ನಾಭರಣ ಸೇರಿದಂತೆ 1 ಕೋಟಿ ರುಪಾಯಿ ಮೌಲ್ಯದ ವಸ್ತುಗಳನ್ನು ಕದ್ದಿದ್ದಾಳೆ. 
ಬೆಂಗಳೂರಿನ ಪೈಲಟ್ ತರಬೇತಿ ಅಕಾಡೆಮಿಯಲ್ಲಿ ಹೆತ್ ಶಾಗೆ ತರಬೇತಿ ಕೊಡಿಸಲು ಪ್ರಿಯಾಂಕಾ 1 ಕೋಟಿ ರುಪಾಯಿ ಮೌಲ್ಯದ ವಸ್ತುಗಳನ್ನು ಕದ್ದು ಶಾಗೆ ನೀಡಿದ್ದಳು. ಬೆಂಗಳೂರಿನ ಶಾ ತಂಗಿದ್ದ ಮನೆಯಲ್ಲಿ ನಗದು ಹಾಗೂ ಚಿನ್ನಾಭರಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. 
ಅಲ್ಲದೆ ಪ್ರಿಯಾಂಕಾ ಹಾಗೂ ಶಾನನ್ನು ಪೊಲೀಸರು ಬಂಧಿಸಿದ್ದಾರೆ. ನವೆಂಬರ್ 29ರಂದು ಪ್ರಿಯಾಂಕಾ ತಂದೆ ಕಿಶೋರ್ ಪರ್ಸನ ಭಕ್ತಿನಗರ ಪೊಲೀಸರಿಗೆ ತಮ್ಮ ಮನೆಯಲ್ಲಿ ದರೋಡೆಯಾಗಿರುವುದಾಗಿ ದೂರು ದಾಖಲಿಸಿದ್ದರು. ಈ ದೂರಿನನ್ವಯ ತನಿಖೆ ಆರಂಭಿಸಿದ್ದ ಪೊಲೀಸರು 17 ದಿನಗಳ ಬಳಿಕ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com