ದೇಶ

ಶಬರಿಮಲೆ ದೇವಾಸ್ಥಾನದಲ್ಲಿ ಮಂಗಳ ಮುಖಿಯರ ಪ್ರವೇಶಕ್ಕೆ ಪೊಲೀಸರ ತಡೆ

ಶಬರಿ ಮಲೆ ದೇಗುಲ ಪ್ರವೇಶಿಸದಂತೆ ಮಂಗಳಮುಖಿಯರಿಗೆ ಕೇರಳ ಪೊಲೀಸರು ತಡೆ ಹಾಕಿದ್ದಾರೆ..

ಶಬರಿಮಲೆ ದೇವಾಸ್ಥಾನದಲ್ಲಿ ಮಂಗಳ ಮುಖಿಯರ ಪ್ರವೇಶಕ್ಕೆ ಪೊಲೀಸರ ತಡೆ
ಸಂಗ್ರಹ ಚಿತ್ರ
Published On :
ಕೊಟ್ಟಾಯಂ: ಶಬರಿ ಮಲೆ ದೇಗುಲ ಪ್ರವೇಶಿಸದಂತೆ ಮಂಗಳಮುಖಿಯರಿಗೆ ಕೇರಳ ಪೊಲೀಸರು ತಡೆ ಹಾಕಿದ್ದಾರೆ.
ನಾಲ್ವರು ಮಂಗಳಮುಖಿಯರ ಪೈಕಿ ಅನನ್ಯ ಎಂಬ ಒಬ್ಟಾಕೆ ಮಾತನಾಡಿ ನಮಗೆ ಪೊಲೀಸರು ಅವಮಾನ ಮಾಡಿ, ಹೆದರಿಸಿದರು. ದೇವಾಲಯದ ಮೂಲ ಶಿಬಿರವಾದ ಎರುಮಲೈನಿಂದ ನಮ್ಮನ್ನು ಹಿಂದಕ್ಕೆ ಕಳುಹಿಸಿದರು ಎಂದು ನೋವು ತೋಡಿಕೊಂಡಿದ್ದಾರೆ..
ಎರ್ನಾಕುಲಂನಿಂದ ನಾವು ನಮ್ಮ ಯಾತ್ರೆ ಆರಂಭಿಸಿದ್ದೆವು. ನಾವು ಎರುಮಲೈ ತಲುಪಿದಾಗ ಪೊಲೀಸರು ಒರಟಾಗಿ ವರ್ತಿಸಿದರು. ಮಹಿಳಾ ಅಧಿಕಾರಿಗಳೂ ನಮ್ಮೊಂದಿಗೆ ಹಾಗೆಯೇ ವರ್ತಿಸಿದರು  ಎಂದು ಅನನ್ಯ ಹೇಳಿಕೊಂಡಿದ್ದಾರೆ.
ಮೊದಲು ಅವರು ಮಹಿಳೆಯರ ವಸ್ತ್ರಗಳಲ್ಲಿ ನಿಮ್ಮನ್ನು ನಾವು ದೇವಾಲಯ ಪ್ರವೇಶಿಸಲು ಬಿಡುವುದಿಲ್ಲ , ಪುರುಷರಂತೆ ವಸ್ತ್ರ ಧರಿಸಿ ಎಂದರು. ಮೊದಲು ನಾವು ಸಾಧ್ಯವಿಲ್ಲ ಎಂದೆವಾದರೂ ಬಳಿಕ ಮನಸ್ಸು ಬದಲಿಸಿ ವಸ್ತ್ರ ಬದಲಾಯಿಸಿಕೊಳ್ಳಲು ಒಪ್ಪಿದೆವಾದರೂ ಪೊಲೀಸರು ಮಾತ್ರ ನಮಗೆ ದೇವಾಲಯ ಪ್ರವೇಶಿಸಿಲು ಅವಕಾಶ ನೀಡಲಿಲ್ಲ ಎಂದಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.